Monday, October 13, 2025

ಅಕ್ಷಯ್ ಕುಮಾರ್ ಮುಂದೆ ಮತ್ತೆ ಎದುರಾದ ‘ಗುಟ್ಕಾ’ ಪಶ್ನೆ: ಹೇಗಿತ್ತು ನೋಡಿ ನಟ ಉತ್ತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ‘ಜಾಲಿ ಎಲ್​​ಎಲ್​ಬಿ 3’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಗುಟ್ಕಾ ಕುರಿತು ಎದುರಾದ ಪ್ರಶ್ನೆಗೆ ಅಕ್ಷಯ್ ಕುಮಾರ್ ಅವರು ಉತ್ತರ ನೀಡಿದರು.

ಅಕ್ಷಯ್ ಕುಮಾರ್ ಅವರು ಈ ಮೊದಲು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ರಿಯಲ್ ಲೈಫ್​​ನಲ್ಲಿ ಅಕ್ಷಯ್ ಕುಮಾರ್ ಅವರು ಬಹಳ ಶಿಸ್ತಿನ ವ್ಯಕ್ತಿ. ಅಂಥವರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಅಕ್ಷಯ್ ಕುಮಾರ್ ಅವರಿಗೆ ಹಲವು ಬಾರಿ ಪ್ರಶ್ನೆ ಎದುರಾಗಿದೆ.

ಇದೀಗ ಪತ್ರಕರ್ತರೊಬ್ಬರು ಗುಟ್ಕಾ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ‘ಗುಟ್ಕಾ ತಿನ್ನಬಾರದು’ ಎಂದು ಅವರು ಉತ್ತರ ನೀಡಿದರು. ಪತ್ರಕರ್ತರು ಮತ್ತೆ ಅದೇ ವಿಚಾರದ ಬಗ್ಗೆ ಕೆದಕಲು ಶುರು ಮಾಡಿದಾಗ, ‘ಸಂದರ್ಶನ ನನ್ನದಾ ಅಥವಾ ನಿಮ್ಮದಾ? ನಾನು ಹೇಳುತ್ತಿದ್ದೇನೆ.. ಗುಟ್ಕಾ ತಿನ್ನುವುದು ಕೆಟ್ಟದ್ದು. ಮುಂದಿನ ಪ್ರಶ್ನೆ ಕೇಳಿ’ ಎಂದು ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದರು.

ಸೆಪ್ಟೆಂಬರ್ 19ರಂದು ‘ಜಾಲಿ ಎಲ್​ಎಲ್​ಬಿ 3’ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್ ಜೊತೆ ಅರ್ಷದ್ ವಾರ್ಸಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೌರಭ್ ಶುಕ್ಲಾ, ಹುಮಾ ಖುರೇಶಿ ಮುಂತಾದವರು ಸಹ ಪಾತ್ರವರ್ಗದಲ್ಲಿ ಇದ್ದಾರೆ. ಈಗಾಗಲೇ ಟ್ರೇಲರ್ ಗಮನ ಸೆಳೆದಿದೆ. ಕೋರ್ಟ್​ ರೂಮ್ ಡ್ರಾಮಾ ಈ ಸಿನಿಮಾದಲ್ಲಿದೆ.

error: Content is protected !!