ಅತ್ತೆ-ಪತಿಯ ವಿರುದ್ಧ ಕಿರುಕುಳ ಆರೋಪ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಹೊಸದಿಗಂತ ವರದಿ ಹಾಸನ: ಮಕ್ಕಳಾಗಿಲ್ಲ ಹಾಗೂ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಅತ್ತೆ ಮತ್ತು ಪತಿ ಕಿರುಕುಳ ನೀಡುತ್ತಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ಗೊರೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಮಲ್ಲದೇವರ ಗ್ರಾಮದ ನಯನ ಗಾಯಗೊಂಡವರು. ನಾಲ್ಕು ವರ್ಷಗಳ ಹಿಂದೆ ಆಲೂರು ತಾಲ್ಲೂಕಿನ ಮರಸು ಗ್ರಾಮದ ಶ್ರೀಧರ ಅವರನ್ನು ನಯನ ವಿವಾಹವಾಗಿದ್ದರು. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅತ್ತೆ ಸಾಕಮ್ಮ ಹಾಗೂ ಪತಿ ಶ್ರೀಧರ ನಿರಂತರವಾಗಿ … Continue reading ಅತ್ತೆ-ಪತಿಯ ವಿರುದ್ಧ ಕಿರುಕುಳ ಆರೋಪ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ