Tuesday, October 21, 2025

ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮ ಆರೋಪ: ಪ್ರಕರಣ ರದ್ದು ಕೋರಿ ADGP ಅಮೃತ್ ಪಾಲ್ ಸಲ್ಲಿಸಿದ್ದ ಅರ್ಜಿ ವಜಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿನ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣ ರದ್ದು ಕೋರಿ ಎಡಿಜಿಪಿ ಅಮೃತ್ ಪಾಲ್ ಸಲ್ಲಿಸಿದ ಅರ್ಜಿ ವಜಾಗೊಂಡಿದೆ.

ಅಮೃತ್ ಪಾಲ್ ಪಿಎಸ್ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಸೇಫ್ ಲಾಕ್ ಕಿ ಅಮೃತ್ ಪಾಲ್ ಬಳಿಯೇ ಇತ್ತು. ಈ ಒಂದು ಕಿ ಯನ್ನು ಕಿರಿಯಾಧಿಕಾರಿಗಳಿಗೆ ಕೊಟ್ಟು ದುರುಪಯೋಗ ಮಾಡಲಾಗಿದೆ ಆರೋಪವಿದೆ. ಹಾಗಾಗಿ ಪ್ರಕರಣ ರದ್ದುಪಡಿಸಿಸದಂತೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು. ವಾದ ಪರಿಗಣಿಸಿ ಎಡಿಜಿಪಿ ಅಮೃತ್ ಪಾಲ್ ಅರ್ಜಿ ವಜಾಗೊಳಿಸಿ ನ್ಯಾ. ಜೆ.ಎಂ ಖಾಜಿ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

error: Content is protected !!