Thursday, October 2, 2025

‌SHOCKING | ಸನ್‌ರೂಫ್‌ ತೆಗೆದು ನಿಂತಿದ್ದ ಬಾಲಕನಿಗೆ ಹೊಡೆದ ಕಬ್ಬಿಣದ ರಾಡ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ಸನ್‌ರೂಫ್‌ ತೆಗೆದು ನಿಲ್ಲೋಕೆ ಬಿಡುವ ಪೋಷಕರೇ ಇದನ್ನು ಖಂಡಿತಾ ಓದಿ..

ಕಾರ್ ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕನಿಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ಕಾರ್ ನಲ್ಲಿ ಕುಟುಂಬ ಹೊರಟಿತ್ತು.  ಮಗು ಕಾರ್ ನ ಸನ್ ರೂಫ್‌ನ ಹೊರಗೆ ತಲೆ ಹಾಕಿ ನಿಂತಿತ್ತು. ಆದರೇ, ಜಿಕೆವಿಕೆ ಬಳಿ ರಸ್ತೆಗೆ ಅಡ್ಡಲಾಗಿ ಎತ್ತರದ ವಾಹನಗಳು ರಸ್ತೆ ಪ್ರವೇಶಿಸದಂತೆ ಕಬ್ಬಿಣದ ಕಂಬಿಯನ್ನು ರಸ್ತೆಯ ಮೇಲೆ ಹಾಕಲಾಗಿತ್ತು.

ವೇಗವಾಗಿ ಬಂದ ಕಾರ್‌ ನ ಚಾಲಕ, ರಸ್ತೆಯಲ್ಲಿರುವ ಕಬ್ಬಿಣದ ಕಂಬಿಯನ್ನು ನೋಡದೇ ಚಲಾಯಿಸಿದ್ದಾರೆ. ಮಗು ಸನ್ ರೂಫ್ ನಲ್ಲಿ ತಲೆಯನ್ನು ಹೊರಗೆ ಹಾಕಿ ನಿಂತಿದ್ದರಿಂದ ತಲೆಗೆ ಮೇಲ್ಬಾಗದಲ್ಲಿದ್ದ ಕಬ್ಬಿಣದ ಕಂಬಿ ಹೊಡೆದಿದೆ. ತಕ್ಷಣವೇ ಬಾಲಕ ಕೆಳಗೆ ಕುಸಿದು ಬಿದ್ದಿದ್ದಾನೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದೆ. 

ಈ ಘಟನೆಯ ದೃಶ್ಯ  ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್  ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ಬೆಂಗಳೂರಿನ ಉತ್ತರ ವಿಭಾಗದ ಸಂಚಾರ ಪೊಲೀಸರು ಈಗ ಮಾಹಿತಿ ಕಲೆ ಹಾಕುತ್ತಿದ್ದಾರೆ.