Tuesday, October 21, 2025

ಪಾಕ್ ಉಗ್ರರ ಜೊತೆ ನಂಟು: ಆಂಧ್ರ ಮೂಲದ ಬಾಣಸಿಗ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಾಣಸಿಗ (chef) ಶೇಕ್ ಕೊತ್ವಾಲ್ ನೂರ್ ಮೊಹಮ್ಮದ್ ಅವರನ್ನು ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ಶನಿವಾರ ಬಂಧಿಸಲಾಗಿದೆ.

ಮೊಹಮ್ಮದ್ (42) ವರ್ತನೆಯ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆತ ಜೈಶ್-ಎ-ಮೊಹಮ್ಮದ್‌ನಂತಹ ಹಲವಾರು ನಿಷೇಧಿತ ಉಗ್ರ ಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಹಮ್ಮದ್ ಭಾರತೀಯ ಪ್ರಜೆಯಾಗಿದ್ದು, ಧರ್ಮಾವರಂ ಮೂಲದವರಾಗಿದ್ದಾರೆ. ಅವರ ಪೂರ್ವಜರು ಸಹ ಅದೇ ಸ್ಥಳದಲ್ಲಿ ವಾಸಿಸುತ್ತಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸಂಪೂರ್ಣ ವಿಚಾರಣೆ ಬಳಿಕವಷ್ಟೇ ಆತನ ಯೋಜನೆ ಏನೆಂಬುದನ್ನು ಅಧಿಕಾರಿಗಳು ಖಚಿತಪಡಿಸಲಿದ್ದಾರೆ ಎಂದು ಧರ್ಮಾವರಂ ಉಸ್ತುವಾರಿ ಉಪವಿಭಾಗದ ಪೊಲೀಸ್ ಅಧಿಕಾರಿ ಯು ನರಸಿಂಗಪ್ಪ ಹೇಳಿದ್ದಾರೆ.

error: Content is protected !!