ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ.
ಮಂಗಳವಾರ ಬೆಳಗ್ಗೆ 7:49ರ ಸುಮಾರಿಗೆ ಭೂಕಂಪನ ಅನುಭವ ಆಗಿದೆ. ಜನರಿಗೆ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ ಅನುಭವ ಆಗಿದೆ.ಸಿಸಿ ಕ್ಯಾಮೆರಾಗಳಲ್ಲೂ ಭೂಕಂಪನದ ತೀವ್ರತೆ ಸೆರೆಯಾಗಿದೆ. ಜೋರಾದ ಸದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಕಂಪನದ ಕುರಿತು ಮಾಹಿತಿ ನೀಡುವ ಆ್ಯಪ್‌ನಲ್ಲೂ ತೀವ್ರತೆ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿರುವ ಸಾಧ್ಯತೆ ಇದೆ.
ವಿಜಯಪುರ ನಗರ, ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ, ಹೊನ್ನೂಟಗಿ ಸೇರಿದಂತೆ ವಿಜಯಪುರ, ತಿಕೋಟ ತಾಲೂಕುಗಳಲ್ಲಿ ಭೂಕಂಪನದ ಅನುಭವ ಆಗಿದೆ. ಜಿಲ್ಲೆಯಲ್ಲಿ ಸರಣಿ ಭೂಕಂಪನದಿಂದ ಜನರು ಕಂಗೆಟ್ಟಿದ್ದಾರೆ. ಕಳೆದ 2 ತಿಂಗಳಲ್ಲಿ 13 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ.
ವಿಜಯಪುರದಲ್ಲಿ ಮತ್ತೆ 3.1 ತೀವ್ರತೆಯ ಭೂಕಂಪನ ಅನುಭವ

