ಬಿಸಿಸಿಐ ಮುಡಿಗೆ ಮತ್ತೊಂದು ಜಾಗತಿಕ ಗರಿ: 2027ರ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತವೇ ಆತಿಥ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. 2027 ರ ಪ್ರಪ್ರಥಮ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಜಾಗತಿಕ ಆತಿಥ್ಯದ ಜವಾಬ್ದಾರಿಯನ್ನು ಭಾರತ ಮುಡಿಗೇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಐತಿಹಾಸಿಕ ಟೂರ್ನಿಯು 2027 ರ ಫೆಬ್ರವರಿ 14 ರಿಂದ 28 ರವರೆಗೆ ಭಾರತದ ಮುಂಬೈ ಮತ್ತು ವಡೋದರಾ ನಗರಗಳಲ್ಲಿ ಜರುಗಲಿದೆ. ಶ್ರೀಲಂಕಾದಿಂದ … Continue reading ಬಿಸಿಸಿಐ ಮುಡಿಗೆ ಮತ್ತೊಂದು ಜಾಗತಿಕ ಗರಿ: 2027ರ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತವೇ ಆತಿಥ್ಯ