Friday, August 29, 2025

FOOD | ಮತ್ತೊಂದು ರೈಸ್‌ ರೆಸಿಪಿ, ಎರಡು ಕ್ಯಾರೆಟ್‌ ಇದ್ರೆ ಸಾಕು, ದಿಢೀರ್‌ ಕ್ಯಾರೆಟ್‌ ರೈಸ್‌ ಹೀಗೆ ಮಾಡಿ

  • ಬಾಸ್ಮತಿ ಅಕ್ಕಿ – 1 ಕಪ್
  • ಗೋಡಂಬಿ ಬೀಜಗಳು – ಅರ್ಧ ಕಪ್
  • ಸಾಸಿವೆ – ಅರ್ಧ ಟೀಸ್ಪೂನ್
  • ಜೀರಿಗೆ – ಅರ್ಧ ಟೀಸ್ಪೂನ್
  • ಕಡಲೆಕಾಯಿ ಅಥವಾ ಶೇಂಗಾ – 1 ಟೀಸ್ಪೂನ್
  • ಲವಂಗ – 3
  • ದಾಲ್ಚಿನಿ – 2 ಇಂಚು
  • ಈರುಳ್ಳಿ – 1
  • ಉಪ್ಪು – ರುಚಿಗೆ ತಕ್ಕಂತೆ
  • ಹಸಿಮೆಣಸಿನಕಾಯಿ – 2
  • ತುರಿದ ಶುಂಠಿ – ಅರ್ಧ ಟೀಸ್ಪೂನ್
  • ಕರಿಬೇವು – ಸ್ವಲ್ಪ
  • ತುರಿದ ಕ್ಯಾರೆಟ್ – 2
  • ಖಾರದ ಪುಡಿ – ಅರ್ಧ ಟೀಸ್ಪೂನ್
  • ಗೋಡಂಬಿ ಬೀಜಗಳು – ಅರ್ಧ ಕಪ್
  • ನಿಂಬೆ – ಒಂದು
  • ಕೊತಂಬರಿ – ಸ್ವಲ್ಪ
  • ಮೊದಲಿಗೆ ಬಾಸುಮತಿ ಅಕ್ಕಿಯಿಂದ ಅನ್ನ ಮಾಡಿ ಇಟ್ಟುಕೊಳ್ಳಿ
  • ಈಗ ಪಾತ್ರೆಯನ್ನು ಇಟ್ಟು 2 ಟೀಸ್ಪೂನ್ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿ ಮಾಡಿದ ಬಳಿಕ ಅದರಲ್ಲಿ ಅರ್ಧ ಕಪ್ ಗೋಡಂಬಿ ಬೀಜಗಳನ್ನು ಸೇರಿಸಿ. ಅವು ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ
  • ಬಳಿಕ ಮತ್ತೊಂದು 2 ಟೀಸ್ಪೂನ್ ಎಣ್ಣೆಯನ್ನು ಪಾತ್ರೆಗೆ ಹಾಕಿ ಅರ್ಧ ಚಮಚ ಸಾಸಿವೆ ಮತ್ತು ಅರ್ಧ ಚಮಚ ಜೀರಿಗೆ ಹಾಕಿ.
  • 3 ಲವಂಗ ಮತ್ತು ಶುಂಠಿ ಹಾಕಿ ಹುರಿದ ಬಳಿಕ ಸ್ವಲ್ಪ ಸಮಯದ ಬಳಿಕ ಕಡಲೆಕಾಯಿ ಹಾಕಬೇಕು. ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ ಬಳಿಕ ತೆಳುವಾದ, ಲಂಬವಾಗಿ ಕತ್ತರಿಸಿದ ಈರುಳ್ಳಿ ಹಾಕಬೇಕು. ಸ್ವಲ್ಪ ಉಪ್ಪು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಬೇಕು.
  • ಬಳಿಕ 2 ಕ್ಯಾರೆಟ್ ತುರಿ ಸೇರಿಸಿ, ಸಣ್ಣ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ಈಗ ಬೇಯಿಸಿದ ಅನ್ನ ಹಾಕಬೇಕು, ಜೊತೆಗೆ ಅರ್ಧ ಚಮಚ ಮೆಣಸು ಪುಡಿ, ಹುರಿದ ಗೋಡಂಬಿ ಬೀಜಗಳು, ನಿಂಬೆ ರಸ ಮತ್ತು ಕೊತ್ತಂಬರಿ ಹಾಕಬೇಕು. ಕೊನೆಗೆ ರುಚಿಗೆ ತಕ್ಕಂತೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ್ರೆ ರೈಸ್‌ ರೆಡಿ.

ಇದನ್ನೂ ಓದಿ