Friday, November 28, 2025

ಸಮಂತಾ-ರಾಜ್ ನಿಡಿಮೊರು ಡೇಟಿಂಗ್ ಮಾಡ್ತಿದ್ದಾರಾ? ಮುಚ್ಚಿಡೋಕೆ ಏನು ಇಲ್ಲ ಅಂದಿದ್ಯಾಕೆ ಸ್ಯಾಮ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ರುತ್ ಪ್ರಭು ಮತ್ತು ಚಿತ್ರ ನಿರ್ದೇಶಕ ರಾಜ್ ನಿಡಿಮೊರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಲವು ತಿಂಗಳಿಂದ ಚರ್ಚೆಯಲ್ಲಿದೆ. ಇಬ್ಬರೂ ಈ ವದಂತಿಗೆ ಸ್ಪಷ್ಟನೆ ನೀಡದಿದ್ದರೂ, ಸಮಂತಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಎಲ್ಲರ ಗಮನ ಸೆಳೆದಿದೆ. ತಮ್ಮ ಹೊಸ ಪರ್ಫ್ಯೂಮ್ ಬ್ರ್ಯಾಂಡ್ “ಸೀಕ್ರೆಟ್ ಆಲ್ಕೆಮಿಸ್ಟ್” ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ತೆಗೆದ ಚಿತ್ರವೊಂದರಲ್ಲಿ ಅವರು ರಾಜ್ ನಿಡಿಮೊರು ಅವರೊಂದಿಗೆ ಆತ್ಮೀಯವಾಗಿ ನಿಂತಿರುವುದು ಕಾಣಿಸಿಕೊಂಡಿದೆ.

ಸಮಂತಾ ತಮ್ಮ ತೋಳುಗಳನ್ನು ರಾಜ್ ಸುತ್ತಲೂ ಸುತ್ತಿಕೊಂಡು, ಇಬ್ಬರೂ ಹತ್ತಿರವಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ರಾಜ್ ಸಹ ನಟಿಯ ಸೊಂಟವನ್ನು ಹಿಡಿದಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳ ಹಿನ್ನೆಲೆಯಲ್ಲಿ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.

ಸಮಂತಾ ಮತ್ತು ರಾಜ್ ನಿಡಿಮೊರು ಮೊದಲ ಬಾರಿಗೆ “ದಿ ಫ್ಯಾಮಿಲಿ ಮ್ಯಾನ್ 2” ಮತ್ತು ನಂತರ “ಸಿಟಾಡೆಲ್: ಹನಿ ಬನ್ನಿ” ವೆಬ್ ಸೀರಿಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದರ ನಂತರದಿಂದಲೇ ಅವರ ಸ್ನೇಹ ಹೆಚ್ಚು ಗಾಢವಾಗಿದೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು.

ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಮಂತಾ, “ಸ್ನೇಹಿತರು ಮತ್ತು ಕುಟುಂಬದವರಿಂದ ಸುತ್ತುವರೆದಿರುವೆ. ಕಳೆದ ಒಂದೂವರೆ ವರ್ಷಗಳಲ್ಲಿ ನನ್ನ ವೃತ್ತಿಜೀವನದಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇನೆ. ರಿಸ್ಕ್ ತೆಗೆದುಕೊಂಡು, ನನ್ನ ಅಂತಃಪ್ರಜ್ಞೆಯನ್ನು ನಂಬಿ ಮುಂದುವರಿಯುತ್ತಿದ್ದೇನೆ. ಇಂದು ಸಣ್ಣ ಗೆಲುವುಗಳನ್ನು ಆಚರಿಸುತ್ತಿದ್ದೇನೆ,” ಎಂದು ಬರೆದಿದ್ದಾರೆ.

ಇದಲ್ಲದೆ, “ನಾನು ಭೇಟಿಯಾದ ಪರಿಶ್ರಮಿ ಜನರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತುಂಬಾ ನಂಬಿಕೆಯೊಂದಿಗೆ ಹೇಳಬಹುದು – ಇದು ಕೇವಲ ಆರಂಭ ಮಾತ್ರ,” ಎಂದು ನಟಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್‌ನ ಕೊನೆಯಲ್ಲಿ ಅವರು “ಮುಚ್ಚಿಡಲು ಏನೂ ಇಲ್ಲ” ಎಂದು ಬರೆದಿದ್ದು, ಅವರ ಸಂಬಂಧದ ಬಗ್ಗೆ ಅಭಿಮಾನಿಗಳ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.

error: Content is protected !!