Friday, September 5, 2025

ಮಿಕ್ಸ್ಚರ್‌ನಲ್ಲೂ ಆರ್ಟಿಫಿಶಿಯಲ್‌ ಕಲರ್ಸ್‌? ಶೀಘ್ರದಲ್ಲೇ ವರದಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಹಿ ತಿಂಡಿಗಳ ಜೊತೆಗೆ, ಮಿಕ್ಚರ್‌ನಲ್ಲೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಖಾರ ತಿಂಡಿ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಧೃಡಪಟ್ಟಿದೆ!

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರೀಕ್ಷೆಯಲ್ಲಿ ಧೃಡಪಟ್ಟಿದೆ  ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಅಧಿಕೃತ ವರದಿ  ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಕೈ ಸೇರಲಿದೆ.

ಕೃತಕ ಬಣ್ಣ ಬಳಕೆ ಧೃಡವಾಗಿರುವ ಹಿನ್ನೆಲೆ ಕ್ರಮಕ್ಕೆ ಚಿಂತನೆಯನ್ನು ನಡೆಸಲಾಗುತ್ತಿದೆ. ವರದಿ ಸಲ್ಲಿಕೆ ನಂತರ ತೀರ್ಮಾನದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಮಾಹಿತಿ ನೀಡುವರು. 



ಇದನ್ನೂ ಓದಿ