Friday, October 24, 2025

ನಟನೆಯ ಹೊಸ ಇನ್ನಿಂಗ್ಸ್‌ಗೂ ಮುನ್ನ ಬಂಡೆ ಮಹಾಕಾಳಿ ದೇವಿ ಮೊರೆಹೋದ ಮೋಹಕ ತಾರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಅವರು ದೀಪಾವಳಿ ಅಮವಾಸ್ಯೆಯ ಪವಿತ್ರ ದಿನದಂದು ಬೆಂಗಳೂರಿನ ಪ್ರಸಿದ್ಧ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ವಿಶೇಷವೆಂದರೆ, ರಮ್ಯಾ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಗೆ.

ಬಂಡೆ ಮಹಾಕಾಳಿಯ ದರ್ಶನ ಪಡೆದ ನಟಿ ರಮ್ಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಮ್‌ಬ್ಯಾಕ್ ಸುದ್ದಿ, ಆಶೀರ್ವಾದದ ನಿರೀಕ್ಷೆ:

ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ರಮ್ಯಾ ಅವರ ಬಹುನಿರೀಕ್ಷಿತ ‘ಕಮ್‌ಬ್ಯಾಕ್’ ಕುರಿತು ದೊಡ್ಡ ಚರ್ಚೆಗಳು ಶುರುವಾಗಿದ್ದವು. ನಿರ್ಮಾಣದ ಜೊತೆಗೇ ನಟನೆಯನ್ನೂ ಮುಂದುವರೆಸುವ ಇಚ್ಛೆಯನ್ನು ನಟಿ ವ್ಯಕ್ತಪಡಿಸಿದ್ದರು. ಆದರೆ, ಅವರ ಮುಂದಿನ ಯೋಜನೆಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಅಪ್‌ಡೇಟ್ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಮಹಾಕಾಳಿ ದೇವಿಯ ಶಕ್ತಿ ಮತ್ತು ಆಶೀರ್ವಾದವನ್ನು ಪಡೆದಿರುವುದು, ಮುಂದಿನ ದಿನಗಳಲ್ಲಿ ಅವರು ತಮ್ಮ ಸಿನಿಮಾ ನಿರ್ಮಾಣ ಮತ್ತು ನಟನೆಯ ಬಗ್ಗೆ ಹೊಸ ಘೋಷಣೆ ಮಾಡುವ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಇತ್ತೀಚೆಗೆ ವೈಯಕ್ತಿಕ ವಿಚಾರಗಳಿಗಾಗಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ರಮ್ಯಾ ಜಾಲತಾಣದಲ್ಲಿ ಸಮರ ಸಾರಿ, ಅವರಿಗೆ ತಕ್ಕ ಶಾಸ್ತಿಯನ್ನೂ ಮಾಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಶಕ್ತಿ ದೇವತೆಯ ದರ್ಶನ ಪಡೆದಿರುವುದು ಮಹತ್ವಪೂರ್ಣವಾಗಿದೆ.

error: Content is protected !!