Saturday, December 27, 2025

ಪ್ರೆಗ್ನೆಂಟ್ಸ್‌ಗಾಗಿ ಪಾರ್ಕಿಂಗ್‌ ಮೀಸಲಿಟ್ಟ ಬೆಂಗಳೂರು ಮಾಲ್ಸ್‌, ಲೇಡೀಸ್‌ ಫುಲ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೀಕೆಂಡ್ಸ್‌ ಅಥವಾ ಇನ್ಯಾವುದೇ ರಜೆಯ ದಿನದಲ್ಲಿ ಬೆಂಗಳೂರಿನ ಮಾಲ್‌ಗಳಿಗೆ ಭೇಟಿ ನೀಡಿದರೆ ಪಾರ್ಕಿಂಗ್‌ ಸಮಸ್ಯೆ ತಪ್ಪಿದ್ದಲ್ಲ. ಮಾಲ್‌ನ ಅರ್ಧಭಾಗದಷ್ಟು ಪಾರ್ಕಿಂಗ್‌ಗೇ ಮೀಸಲಿಟ್ಟರೂ ಸಮಸ್ಯೆ ಮುಗಿಯೋದಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನ ಮಾಲ್‌ನಲ್ಲಿ ಪ್ರೆಗ್ನೆಂಟ್ಸ್‌ಗಾಗಿ ಪಾರ್ಕಿಂಗ್‌ ಮೀಸಲಿಡಲಾಗಿದೆ.

ಗರ್ಭಿಣಿಯರಿಗೆ ಮೀಸಲಾದ ಪಾರ್ಕಿಂಗ್ ಸ್ಥಳದ ಒಂದು ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಾಲ್​​​ವೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ. ಮಹಿಳೆಯರಿಗಾಗಿ, ಅದರಲ್ಲೂ ಗರ್ಭಿಣಿಯರಿಗೆ ಈ ವಿಶೇಷ ಪಾರ್ಕಿಂಗ್​​ ವ್ಯವಸ್ಥೆಯನ್ನು ಮಾಡಲಾಗಿದೆ. ಇದೀಗ ಮಾಲ್​​ನ ಈ ಪರಿಕಲ್ಪನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಾಲ್​​​ನ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಸಣ್ಣದಾಗಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್​​ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ವಿಡಿಯೋವೊಂದನ್ನು ಅಕ್ಷಯ್ ರೈನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದು “ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ” ಎಂಬ ಬೋರ್ಡ್​​ನ್ನು ಕೂಡ ಈ ಪಾರ್ಕಿಂಗ್​ ಸ್ಥಳದಲ್ಲಿ ಹಾಕಲಾಗಿದೆ. ಗುಲಾಬಿ ಥೀಮ್‌ ಮೂಲಕ ಈ ಪಾರ್ಕಿಂಗ್​​ ಸ್ಥಳವನ್ನು ವಿನ್ಯಾಸ ಮಾಡಲಾಗಿದೆ. ಇದು ತುಂಬಾ ವಿಶೇಷವಾಗಿ ಕಂಡು ಬಂದಿದೆ. ದೊಡ್ಡ ಶಾಪಿಂಗ್ ಮಾಲ್​​ನಲ್ಲಿ ಜನ ಹಾಗೂ ವಾಹನ ದಟ್ಟಣೆ ಇರುವುದು ಸಹಜ. ಇದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಪಿಂಕ್​​ ಕಲರ್​​​ನಿಂದ ಈ ಪಾರ್ಕಿಂಗ್​​ ಸ್ಥಳವನ್ನು ಅಲಂಕಾರ ಮಾಡಲಾಗಿದೆ.

error: Content is protected !!