ಹೊಸದಿಗಂತ ಡಿಜಿಟಲ್ ಡೆಸ್ಕ್:
148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ವೆಚ್ಚವಾಗಲಿದ್ದು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಲಾ ಶೇ. 20ರಷ್ಟು ಹಣಕಾಸು ಒದಗಿಸುತ್ತವೆ. ಉಳಿದ ಶೇ. 60ರಷ್ಟು ಹಣವನ್ನು ಸಾಲದ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬಿಎಸ್‌ಆರ್‌ಪಿ ಯೋಜನೆಯನ್ನು ಶೇ. 51ರಷ್ಟು ಈಕ್ವಿಟಿಯೊಂದಿಗೆ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ನಿರ್ವಹಿಸುತ್ತಿದೆ. ಈ ಯೋಜನೆಯ ಕಾರಿಡಾರ್ 2 ಮತ್ತು 4ರಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯವು ಕೆ-ರೈರ್‌ಗೆ 242 ಎಕರೆ ಭೂಮಿಯನ್ನು ನೀಡಿದೆ.
ಬಿಎಸ್‌ಆರ್‌ಪಿ 4 ಕಾರಿಡಾರ್‌ಗಳನ್ನು ಹೊಂದಿದೆ, ಅವುಗಳೆಂದರೆ:
- ಕಾರಿಡಾರ್-1: ಕೆಎಸ್‌ಆರ್ ಬೆಂಗಳೂರು ನಗರ – ದೇವನಹಳ್ಳಿ (41 ಕಿ.ಮೀ.)
- ಕಾರಿಡಾರ್-2: ಬೈಯ್ಯಪನಹಳ್ಳಿ – ಚಿಕ್ಕಬಾಣಾವರ (25 ಕಿ.ಮೀ.)
- ಕಾರಿಡಾರ್-3: ಕೆಂಗೇರಿ – ವೈಟ್‌ಫೀಲ್ಡ್ (36 ಕಿ.ಮೀ.)
- ಕಾರಿಡಾರ್-4: ಹೀಲಳಿಗೆ – ರಾಜಾನುಕುಂಟೆ (46 ಕಿ.ಮೀ.)

