Monday, January 12, 2026

ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಫಸ್ಟ್‌ ಪ್ಲೇಸ್‌! ಯಾವ ಜಿಲ್ಲೆಗೆ ಕಡೆಯ ಸ್ಥಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರಿಸುವಾಗ ರಾಜ್ಯದ ಜಿಲ್ಲಾವಾರು ತಲಾದಾಯದ ಬಗ್ಗೆ ಮಾಹಿತಿ ನೀಡಿದ್ದು, ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಕಡಿಮೆ‌ ಇರುವುದು ತಲಾ ಆದಾಯದಲ್ಲಿ ಹಿಂದುಳಿಯಲು ಒಂದು ಕಾರಣ. ತಲಾ ಆದಾಯದಲ್ಲಿ ಕಲಬುರಗಿ ಅತ್ಯಂತ ಹಿಂದುಳಿದಿದೆ ಎಂದು ಸಿಎಂ ಹೇಳಿ, ತಲಾ ಆದಾಯದ ಜಿಲ್ಲಾವಾರು ಪಟ್ಟಿಯನ್ನು ಸದನದ ಮುಂದಿಟ್ಟಿದ್ದಾರೆ.

ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಬೆಂಗಳೂರು ನಗರ- 7,38,910

ದಕ್ಷಿಣ ಕನ್ನಡ- 5,56,059

ಉಡುಪಿ- 5,33,469

ಚಿಕ್ಕಮಗಳೂರು-4,44,472

ಬೆಂಗಳೂರು ಗ್ರಾಮಾಂತರ- 4,04,138

ಶಿವಮೊಗ್ಗ-3,49,177

ಮಂಡ್ಯ- 3,06,448

ತುಮಕೂರು-3,02,707

ಕೊಡಗು- 2,94,898

ಹಾಸನ -2,94,272

ಬಳ್ಳಾರಿ- 2,93,985

ರಾಮನಗರ -2,77,619

ಉತ್ತರ ಕನ್ನಡ- 2,66,619

ಧಾರವಾಡ – 2,61,563

ಚಾಮರಾಜನಗರ- 2,59,387

ಬಾಗಲಕೋಟೆ- 2,49,478

ಮೈಸೂರು- 2,39,296

ಚಿಕ್ಕಬಳ್ಳಾಪುರ- 2,31,154

ಕೋಲಾರ- 2,15,255

ದಾವಣಗೆರೆ – 2,09,655

ಚಿತ್ರದುರ್ಗ – 1,98,950

ಗದಗ- 1,94,453

ಹಾವೇರಿ- 1,84,111

ರಾಯಚೂರು- 1,66,371

ವಿಜಯನಗರ- 1,65,546

ವಿಜಯಪುರ- 1,63,431

ಬೀದರ್- 1,63,298

ಬೆಳಗಾವಿ- 1,62,987

ಕೊಪ್ಪಳ- 1,61,491

ಯಾದಗಿರಿ- 1,46,364

ಕಲಬುರಗಿ- 1,43,610

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!