Thursday, September 4, 2025

ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದ್ರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕೈಬಿಡಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಧರ್ಮಸ್ಥಳ ಯಾತ್ರೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನವರಿಗೆ ಧರ್ಮಸ್ಥಳ ಚಲೋ ಮಾಡುವ ಬುದ್ಧಿ ಬಂದಿರೋದು ಒಳ್ಳೆಯದು. ಇದುವರೆಗೆ ಮಸೀದಿ, ದರ್ಗಾಗೆ ಹೋಗ್ತಿದ್ರು. ಈಗ ಧರ್ಮಸ್ಥಳಕ್ಕೆ ಹೋಗ್ತಿರೋದು ಸ್ವಾಗತ. ಸಿದ್ದರಾಮಯ್ಯ ಕೂಡಾ ಹೋಗಲಿ, ಡಿಕೆಶಿ ಸಹ ಹೋಗಲಿ. ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ