ಚೆನ್ನಮ್ಮನ ಶೌರ್ಯದ ನೆನಪಿಗೆ ಸಾಕ್ಷಿಯಾಗಲಿದೆ ಬೆಳಗಾವಿ; ‘ಕಿತ್ತೂರು ಉತ್ಸವ-2026’ರ ಅದ್ಧೂರಿ ಆಚರಣೆಗೆ ಸಜ್ಜು

ಹೊಸದಿಗಂತ ವರದಿ ಬೆಳಗಾವಿ: ಕನ್ನಡ ನಾಡಿನ ಸ್ವಾತಂತ್ರ್ಯ ಸಂಗ್ರಾಮದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸ, ಶೌರ್ಯ ಮತ್ತು ದೇಶಪ್ರೇಮದ ಇತಿಹಾಸವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಆಯೋಜಿಸಿರುವ ‘ಚೆನ್ನಮ್ಮನ ಕಿತ್ತೂರು ಉತ್ಸವ-2026’ಕ್ಕೆ ಅಕ್ಟೋಬರ್ 23ರಂದು ಚಾಲನೆ ದೊರೆಯಲಿದೆ. ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 23, 24 ಮತ್ತು 25ರಂದು ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ … Continue reading ಚೆನ್ನಮ್ಮನ ಶೌರ್ಯದ ನೆನಪಿಗೆ ಸಾಕ್ಷಿಯಾಗಲಿದೆ ಬೆಳಗಾವಿ; ‘ಕಿತ್ತೂರು ಉತ್ಸವ-2026’ರ ಅದ್ಧೂರಿ ಆಚರಣೆಗೆ ಸಜ್ಜು