Friday, January 9, 2026

ಬಳ್ಳಾರಿ ಎಸ್‌.ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ: ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಸ್ಪೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿ ಅಮಾನತುಗೊಂಡಿರುವ ಎಸ್‌.ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ ವದಂತಿ ಕುರಿತು ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪವನ್ ಅವರ ಡೆತ್‌ನೋಟ್ ಮುಚ್ಚಟ್ಟಿದೆ. ಅಧಿಕಾರಿಗಳು ನಿನ್ನೆ ಡೆತ್‌ನೋಟ್ ಕೈಯಲ್ಲಿ ಮುಚ್ಚಿಟ್ಕೊಂಡು ಮಾತಾಡಿದ್ರು. ಅದರಲ್ಲಿ‌ ಏನಿದೆ ಅಂತ ಬಹಿರಂಗಪಡಿಸಬೇಕು ಅಂತ ಆಗ್ರಹಿಸಿದ್ದಾರೆ.

ನಮಗೆ ಬಂದಿರುವ ಮಾಹಿತಿ ಪ್ರಕಾರ ಡೆತ್‌ನೋಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿದ್ದಾರೆ. ಡೆತ್‌ನೋಟ್ ನಲ್ಲಿ ಏನಿದೆ? ಸರ್ಕಾರ ಯಾಕೆ ಮುಚ್ಚಿಡೋ ಪ್ರಯತ್ನ ಮಾಡ್ತಿದೆ ಅಂತ ಸಚಿವರು ಪ್ರಶ್ನಿಸಿದರು.

error: Content is protected !!