Wednesday, September 10, 2025

ಬೆಂಗಳೂರಿನ ಮೆಟ್ರೋಗೆ ಸೇಂಟ್ ಮೇರಿ‌ ಹೆಸರು: ಶಂಕರ್‌ನಾಗ್‌ ಫ್ಯಾನ್ಸ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋ ನಿಲ್ದಾಣವೊಂದಕ್ಕೆ ಸೇಂಟ್ ಮೇರಿ ಹೆಸರಿಡುವ ಪ್ರಸ್ತಾವನೆಯನ್ನು ಪರಿಗಣಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಈ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಮೆಟ್ರೋ ಶಂಕರ್‌ನಾಗ್‌ ಅವರ ಕನಸು, ಅವರ ಹೆಸರನ್ನು ಬಿಟ್ಟು ಬೇರೆ ಆಯ್ಕೆ ಯಾಕೆ ಎಂದು ಫ್ಯಾನ್ಸ್‌ ಗರಂ ಆಗಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ಜನರ ಹಿತಾಸಕ್ತಿಗಳನ್ನು ಹೃದಯದಲ್ಲಿಟ್ಟುಕೊಂಡು ಶಂಕರ್ ನಾಗ್ ಅವರು, ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಇದಕ್ಕಾಗಿ ತಂತ್ರಜ್ಞಾನವನ್ನು ಅಧ್ಯಯನ ಮಾಡಲು ಖರ್ಚು ಮಾಡಿದ್ದರು, ಅಂಥವರ ಹೆಸರನ್ನು ಇಡೋಕೆ ಕಷ್ಟ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್‌ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋ ಕನಸು ಕಂಡ ವ್ಯಕ್ತಿಯ ಹೆಸರನ್ನೂ ಇನ್ನೂ ನಾಮಕರಣ ಮಾಡಿಲ್ಲ. ಇಂದು ಶಂಕರ್ ನಾಗ್’ಗೆ ಮಾಡಿದ ಅನ್ಯಾಯ ಎಂದಿದ್ದಾರೆ.

ಇದನ್ನೂ ಓದಿ