Friday, September 12, 2025

ಬೆಂಗಳೂರಿಗರೇ ಗಮನಿಸಿ.. ವಾರಂತ್ಯದಲ್ಲಿ ವಿದ್ಯುತ್ ಕೂಡ ಇಲ್ಲವಂತೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ.ಇದೀಗ ಇದರ ಬೆನ್ನಲ್ಲೇ ನಗರದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ.

ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ ಅಂದರೆ ಶನಿವಾರ ಹಾಗೂ ನಾಡಿದ್ದು ಭಾನುವಾರ (ಸೆಪ್ಟೆಂಬರ್ 14, 15) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಶನಿವಾರ (ಸೆಪ್ಟೆಂಬರ್ 13) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಮಾರತಹಳ್ಳಿ, ದೊಡ್ಡನೆಕುಂದಿ, ಇಸ್ರೋ ಕ್ಯಾಂಪಸ್, ಬಾಗ್ಮನೆ ಟೆಕ್ ಪಾರ್ಕ್, ಜಿಟಿಆರ್‌ಇ, ಡಬ್ಲ್ಯುಟಿಸಿ ಇಂದಿರಾನಗರ ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1 ಮತ್ತು 2ನೇ ಹಂತ, 80 ಅಡಿ ರಸ್ತೆ, ಸಿಎಂಎಚ್ ರಸ್ತೆ, ಜೀವನ್‌ಭೀಮಾನಗರ, ಗೀತಾಂಜಲಿ ಲೇಔಟ್, ಬಿಡಿಎ ಲೇಔಟ್, ಎಲ್‌ಐಸಿ ಕಾಲೋನಿ, ತಿಪ್ಪಸಂದ್ರ, ರಮೇಶ್‌ನಗರ, ಟಾಟಾ ಹೌಸಿಂಗ್, ಬಿಇಎಂಎಲ್, ಕಾಡಾ ಹೌಸಿಂಗ್, ಮಲ್ಲೇಶ್‌ಪಾಲ್, ಎಡಿಎ ಲೇಔಟ್, ಬಸವನಗರ, ಅನ್ನಸಂದ್ರಪಾಳ್ಯ, ವಿಭೂತಿಪುರ, ಜೈನ್ ಹೈಟ್ಸ್, ವಿಶ್ವಜಿತ್ ಲೇಔಟ್, ಆದರ್ಶ ವಿಲ್ಲಾ, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ಏರ್‌ಪೋರ್ಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಭಾನುವಾರ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಟ್
220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4 ನೇ ಬ್ಲಾಕ್, 2 ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ, ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 10 ನೇ ಕ್ರಾಸ್, 1 ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3 ನೇ ಕ್ರಾಸ್, 4 ನೇ ಕ್ರಾಸ್, 1 ನೇ ಸ್ಟೇಟ್ಜ್ ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಎಂಜಿನಿಯರ್, ರಸ್ತೆ, ಸನ್ರೈಸ್ ಕಾಸ್ಟಿಂಗ್ ರಸ್ತೆ, 3 ನೇ ಹಂತ, ವೈಷ್ಣವಿ ಮಾಲ್, ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ