Sunday, September 7, 2025

ಟ್ರಾಫಿಕ್‌ ಫೈನ್‌ ಡಿಸ್ಕೌಂಟ್‌ಗೆ ಬೆಸ್ಟ್‌ ರೆಸ್ಪಾನ್ಸ್‌: 35.72 ಕೋಟಿ ದಂಡ ಪಾವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟ್ರಾಫಿಕ್ ಫೈನ್ ಕಟ್ಟಲು 50% ರಿಯಾಯಿತಿ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಈಗಾಗಲೇ 35.72 ಕೋಟಿ ರೂ. ದಂಡ ಪಾವತಿಯಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿತ್ತು. ಅದರ ಬೆನ್ನಲ್ಲೇ ಬಾಕಿಯಿದ್ದ 12,70,950 ಕೇಸ್‌ಗಳ ದಂಡ ಪಾವತಿಯಾಗಿದ್ದು. ಈವರೆಗೂ 35.72 ಕೋಟಿ ರೂ. ಸಂಗ್ರಹವಾಗಿದೆ.

ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ