ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭದ್ರಾವತಿ ತಾಲೂಕಿನ ಬಿಆರ್‌ಪಿ ಜಲಾಶಯಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, 5 ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯ ರೈತರಿಗೆ ಅನುಕೂಲವಾಗಿದೆ. ನಾನು ಬಹಳ ಸಂತೋಷದಿಂದ ಭದ್ರಾ ಆಣೆಕಟ್ಟಿಗೆ ಬಾಗಿನ ನೀಡಲು ಬಂದಿದ್ದೇನೆ. ಈ ಡ್ಯಾಂ ಜುಲೈನಲ್ಲೇ ತುಂಬಿದ್ದು ನಮ್ಮ ಸುದೈವ ಎಂದರು.
ಈಗಾಗಲೇ ಭದ್ರಾವತಿಗೆ ಸ್ಪೆಷಲ್ ಗ್ರ್ಯಾಂಟ್ ನೀಡಲಾಗಿದೆ. ಸಚಿವ ಮಧು ಬಂಗಾರಪ್ಪ, ಶಾಸಕಿ ಬಲ್ಕೀಶ್ ಬಾನು ಸಹ ಜನರ ಮೇಲಿನ ಕಾಳಜಿಯಿಂದ ವಿಶೇಷ ಅನುದಾನ ಪಡೆದಿದ್ದಾರೆ. ಎಲ್ಲಾ ಶಾಸಕರು ರೈತರ ಪರ, ಜನರ ಪರವಾಗಿದ್ದಾರೆ. ಅವಕಾಶ ಸಿಕ್ಕಾಗ ಪುಣ್ಯದ ಕೆಲಸ ಮಾಡುತ್ತಿರಬೇಕು ಎಂದರು.
ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಈ ಬಗ್ಗೆ ರೈತ ಮುಖಂಡರನ್ನ ಕರೆಸಿ ಮಾತಾಡುತ್ತೇವೆ. ಇನ್ನೂ ಮಹಾದಾಯಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಅನುಮತಿ ಕೊಟ್ಟರೆ ಕೆಲಸ ಆರಂಭಿಸುತ್ತೇವೆ ಎಂದರು.