Sunday, September 28, 2025

ಭೀಮಾ ನದಿ ಅಬ್ಬರ: ಯಾದಗಿರಿ- ಕಲಬುರಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ಹೊಸ ದಿಗಂತ ವರದಿ, ಯಾದಗಿರಿ:

ಸತತ ಮಳೆಯಿಂದ ಭೀಮಾ ನದಿ ಭಾರಿ ಭಾರಿ ಅವಾಂತರ ಸೃಷ್ಠಿಸಿದ್ದು, ಯಾದಗಿರಿ ನಗರದ ಹಲವು ಬಡಾವಣೆಗಳಿಗೆ ಭಾನುವಾರ ನೀರು‌ ನುಗ್ಗಿದೆ.

ಮಹಾರಾಷ್ಟ್ರದಿಂದ ಭೀಮಾ ನದಿಗೆ ಲಕ್ಷಾಂತರ ಕ್ಯೂಅಎಕ್ ನೀರು ಹರಿಬಿಟ್ಟ ಕಾರಣ ಯಾದಗಿರಿ ನಗರದ ಹೊರವಲಯದಲ್ಲಿನ ಭೀಮಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರೈಲ್ವೆ ನಿಲ್ದಾಣದ ಅಕ್ಕಪಕ್ಕದಲ್ಲಿನ ಹಲವು ಬಡಾವಣೆಗಳ ನೂರಾರು ಮನೆಗಳಲ್ಲಿ ನೀರು ನುಗ್ಗಿದೆ.

ಇದರಿಂದ ನಿವಾಸಿಗಳು ಪರೇಶಾನ್ ಆಗಿದ್ದು ಶನಿವಾರ ರಾತ್ರಿ ನಿದ್ದೆಯಿಲ್ಲದೆ ಜಾಗರಣೆ ಮಾಡುವಂತಾಗಿದೆ. ನಗರದ ಗ್ರೀನ್ ಸಿಟಿ, ವೀರಭದ್ರೇಶ್ವರ ನಗರ,ಲಾಡಿಸ್ ಗಲ್ಲಿ ಬಡಾವಣೆಯಲ್ಲಿ ನದಿ ನೀರು ಹೊಕ್ಕಿದೆ.

ಯಾದಗಿರಿ ನಗರದ ಡಾನ್ ಬಾಸ್ಕ್ ಶಾಲೆ ಸಮೀಪದ ದೊಡ್ಡ ಹಳ್ಳ ಭರ್ತಿಯಾಗಿದ್ದು, ಯಾದಗಿರಿ- ಕಲಬುರಗಿ ರಾಜ್ಯ ಹೆದ್ದಾರಿ ಸ್ಥಗಿತಗೊಂಡಿದೆ.