ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್‌ಎಲ್ ಭೈರಪ್ಪ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೈರಪ್ಪನವರು ಹೃದಯಸ್ತಂಭನದಿಂದ ಮಧ್ಯಾಹ್ನ 2:30ಕ್ಕೆ ರಾಷ್ಟ್ರೋತ್ತಾನ ಆಸ್ಪತ್ರೆಯಲ್ಲಿ ನಿಧನರಾದರು.
ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪುರಸ್ಕೃತ ಭೈರಪ್ಪರವರು ಕೇವಲ ಕನ್ನಡದಲ್ಲಿ ಕನ್ನಡದ ಓದುಗರರನ್ನು ಸೆಳೆದಿದ್ದು ಅಷ್ಟೇ ಅಲ್ಲ, ಜೊತೆಗೆ ಬೇರೆ ಬೇರೆ ಭಾಷೆಗಳಲ್ಲಿಯೂ ಓದುಗರನ್ನು ಸೆಳೆದಿದ್ದಾರೆ.
ಭೈರಪ್ಪ ಅವರ ಕೃತಿಗಳು, ಕಾದಂಬರಿಗಳು ಸಾಕಷ್ಟು ಭಾಷೆಗಳಲ್ಲಿ ಅನುವಾದವಾಗಿದೆ. ಅವರ ಕಾದಂಬರಿಗಳು ಕೇವಲ ಕನ್ನಡದಲ್ಲಿ ಮಾತ್ರವೇ ಜನಪ್ರಿಯವಾಗಿಲ್ಲ, ಬದಲಿಗೆ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡು ವಿಶ್ವವ್ಯಾಪಕವಾಗಿ ಮನ್ನಣೆ ಗಳಿಸಿವೆ.
ಭೈರಪ್ಪನವರ ಕೆಲವು ಪ್ರಮುಖ ಕಾದಂಬರಿಗಳ ಅನುವಾದದ ವಿವರಗಳನ್ನು ಗಮನಿಸಿದರೆ ಸಾಕಷ್ಟು ಕೃತಿಗಳು ಕಾದಂಬರಿಗಳು ಹಲವು ಭಾಷೆಯಲ್ಲಿ ಅನುವಾದಗೊಂಡಿದೆ.
ಭಿತ್ತಿ: ಹಿಂದಿ ಮತ್ತು ಮರಾಠಿಗೆ ಅನುವಾದವಾಗಿದೆ.
ಧರ್ಮಶ್ರೀ: ಸಂಸ್ಕೃತ ಮತ್ತು ಮರಾಠಿಗೆ ಅನುವಾದಗೊಂಡಿದೆ.
ವಂಶವೃಕ್ಷ: ತೆಲುಗು, ಮರಾಠಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್‌ಗೆ ಅನುವಾದವಾಗಿದೆ.
ನಾಯಿ ನೆರಳು: ಗುಜರಾತಿ ಮತ್ತು ಹಿಂದಿಗೆ ಅನುವಾದಗೊಂಡಿದೆ.
ತಬ್ಬಲಿಯು ನೀನಾದೆ ಮಗನೆ: ಹಿಂದಿಗೆ ಅನುವಾದವಾಗಿದೆ.
ಗೃಹಭಂಗ: ಹದಿನಾಲ್ಕು ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ದಾಟು: ಇಂಗ್ಲಿಷ್ ಮತ್ತು ಹದಿನಾಲ್ಕು ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ಅನ್ವೇಷಣ: ಹಿಂದಿ ಮತ್ತು ಮರಾಠಿಗೆ ಅನುವಾದವಾಗಿದೆ.
ಪರ್ವ: ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು, ಬೆಂಗಾಲಿ ಮತ್ತು ತಮಿಳಿಗೆ ಅನುವಾದವಾಗಿದೆ.
ನೆಲೆ: ಹಿಂದಿಗೆ ಅನುವಾದಗೊಂಡಿದೆ.
ಸಾಕ್ಷಿ: ಹಿಂದಿ ಮತ್ತು ಇಂಗ್ಲಿಷ್‌ಗೆ ಅನುವಾದವಾಗಿದೆ.
ಅಂಚು: ಹಿಂದಿ ಮತ್ತು ಮರಾಠಿಗೆ ಅನುವಾದವಾಗಿದೆ.
ತಂತು: ಹಿಂದಿ ಮತ್ತು ಮರಾಠಿಗೆ ಅನುವಾದವಾಗಿದೆ.
ಸಾರ್ಥ: ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಸಂಸ್ಕೃತಕ್ಕೆ ಅನುವಾದವಾಗಿದೆ.