Thursday, September 4, 2025

CINE | ಒಟಿಟಿಗೆ ರಿಲೀಸ್‌ ಆಗಲಿವೆ ದೊಡ್ಡ ಸಿನಿಮಾಗಳು! ತಪ್ಪದೇ ವೀಕ್ಷಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ತಿಂಗಳಿನಲ್ಲಿ ಸಾಕಷ್ಟು ಸಿನಿಮಾಗಳು ಒಟಿಟಿಗೆ ಬರುತ್ತಿವೆ. ದೊಡ್ಡ ಸಿನಿಮಾಗಳು ಇದಾಗಿದ್ದು, ನೀವು ಮಿಸ್‌ ಮಾಡದೇ ನೋಡಬಹುದು. ಯಾವೆಲ್ಲಾ ಸಿನಿಮಾಗಳು? ಇಲ್ಲಿದೆ ಡೀಟೇಲ್ಸ್‌..

ಸೈಯಾರಾ – ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ ಬ್ಲಾಕ್‌ಬಸ್ಟರ್‌ ಸಿನಿಮಾ ಸೆಪ್ಟೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಮಲಿಕ್- ಈ ಚಿತ್ರವನ್ನು ಪುಲ್ಕಿತ್ ನಿರ್ದೇಶಿಸಿದ್ದಾರೆ ಮತ್ತು ಕುಮಾರ್ ತೌರಾನಿ ಮತ್ತು ಜೈ ಶೆವಕ್ರಮಣಿ ನಿರ್ಮಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಪ್ರೊಸೆನ್‌ಜಿತ್ ಚಟರ್ಜಿ ಮತ್ತು ಮಾನುಷಿ ಚಿಲ್ಲರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 5ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.

ಇನ್ಸ್‌ಪೆಕ್ಟರ್ ಝೆಂಡೆ- ನಟ ಚಿನ್ಮಯ್ ಮಾಂಡ್ಲೇಕರ್ ನಿರ್ದೇಶನ ಮತ್ತು ಕಥೆ ಬರೆದಿರುವ ಈ ಹಾಸ್ಯ ಥ್ರಿಲ್ಲರ್ ಚಿತ್ರದಲ್ಲಿ ಮನೋಜ್ ಬಾಜ್‌ಪೇಯಿ ಇನ್ಸ್‌ಪೆಕ್ಟರ್ ಮಧುಕರ್ ಝೆಂಡೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಕೂಲಿ – ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿರುವ ‘ಕೂಲಿ’ ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ನಾಗಾರ್ಜುನ, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಸತ್ಯರಾಜ್, ಉಪೇಂದ್ರ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 11 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಸು ಫ್ರಮ್ ಸೋ: ಸು ಫ್ರಮ್ ಸೋ ಸಿನಿಮಾ ಕೂಡ ಈ ತಿಂಗಳು ಹಾಟ್​ಸ್ಟಾರ್ ಒಟಿಟಿಯಲ್ಲಿ ಬಿಡುಗಡೆ ಆಗೋ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿ ನಟನೆಯ, ಜೆಪಿ ತುಮಿನಾಡ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು.

ಇದನ್ನೂ ಓದಿ