Tuesday, October 14, 2025

ವಿಷ್ಣುವರ್ಧನ್ ಫ್ಯಾನ್ಸ್​ಗೆ ಬಿಗ್ ಶಾಕ್: ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮದಿನಾಚರಣೆಗೆ ಹೈಕೋರ್ಟ್ ನಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಅಭಿಮಾನಿಗಳು ಸಿದ್ಧವಾಗಿದ್ದರು. ಆದರೆ ಇದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.

ಸೆಪ್ಟೆಂಬರ್​ 18 ರಂದು ವಿಷ್ಣುವರ್ಧನ್ ಅವರ ಜಯಂತೋತ್ಸವವನ್ನು ಉದ್ಯಾನ ನಗರಿಯ ಕಂಗೇರಿ ಬಳಿಯ ಉತ್ತರಹಳ್ಳಿ ಮೇನ್ ರೋಡ್​​ನಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆ ಮಾಡಲು ಅವರ ಅಭಿಮಾನಿಗಳು ತಯಾರಿಯಲ್ಲಿದ್ದರು. ಇದಕ್ಕಾಗಿ ಅವರ ಅಭಿಮಾನಿಗಳು ಸಂಘ, ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅನುಮತಿಯನ್ನು ನಿರಾಕರಣೆ ಮಾಡಿದೆ.

ಸಮಾಧಿ ಜಾಗದ ವಿವಾದ ವಿಚಾರಣೆ ಇನ್ನೂ ಬಾಕಿ ಇರುವ ಕಾರಣ ಸಂಭ್ರಮಾಚರಣೆ ಬೇಡ ಎಂದು ಹೇಳಿದೆ.

ಇನ್ನೇನು ಒಂದೇ ದಿನ ಕಳೆದರೆ ದಾದಾ ಅವರ ಹುಟ್ಟುಹಬ್ಬ ಇದೆ. ಇಷ್ಟರೊಳಗೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಸಂಭ್ರಮಾಚರಣೆ ಎಲ್ಲಿ? ಹೇಗೆ? ಎನ್ನುವುದನ್ನ ತಿಳಿಸಬೇಕಿದೆ. ಹೀಗಾಗಿ ಹುಟ್ಟುಹಬ್ಬದ ಬಗ್ಗೆ ಸಾಹಸಸಿಂಹನ ಅಭಿಮಾನಿಗಳಲ್ಲಿ ಸದ್ಯಕ್ಕಂತೂ ಗೊಂದಲ ಅಂತೂ ಇದ್ದೇ ಇದೆ.

error: Content is protected !!