Sunday, September 7, 2025

Bigg Boss 12 | ಈ ಬಾರಿ ಬಿಗ್ ಬಾಸ್‌ ಮನೆಗೆ ನೀವೂ ಹೋಗ್ಬೇಕಾ? ಇಷ್ಟು ಮಾಡಿ ಸಾಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-12 ಪ್ರೋಮೋ ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಕಿಚ್ಚ ಸುದೀಪ್ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ಈ ಪ್ರೋಮೋ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ವಿಶೇಷವಾಗಿ ಸುದೀಪ್ ಅವರ ಹೊಸ ಕರ್ಲಿ ಹೇರ್ ಲುಕ್ ಮತ್ತು ಫ್ರೀ ಸೈಜ್ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿದ್ದು, ಅವರ ಡೀಪ್ ವಾಯ್ಸ್‌ನಲ್ಲಿ ಕೇಳಿಬಂದ “ನಾನು ರೆಡಿ” ಎಂಬ ಡೈಲಾಗ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಸಾಮಾನ್ಯ ಜನತೆಗೆ ಕೂಡ ಎಂಟ್ರಿ ಕೊಡುವ ಅವಕಾಶ ಕಲ್ಪಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್‌ಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಲಕ್ಕಿ ವಿನ್ನರ್ಸ್‌ಗಳಿಗೆ ಬಿಗ್‌ಬಾಸ್ ಮನೆಯಲ್ಲಿ ಅತಿಥಿಗಳಾಗಿ ಭಾಗವಹಿಸುವ ಅವಕಾಶ ಸಿಗಲಿದೆ. ಇದು ಪ್ರೇಕ್ಷಕರಿಗೆ ವಿಶೇಷ ಉಡುಗೊರೆ ಎನ್ನಬಹುದು.

ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್-12 ಸೆಪ್ಟೆಂಬರ್ 28ರಿಂದ ಅದ್ಧೂರಿಯಾಗಿ ಪ್ರಾರಂಭವಾಗಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಕಳೆದ ಕೆಲವು ವಾರಗಳಿಂದ ಶೋ ಶುರುವಾಗುವ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಊಹಾಪೋಹಗಳು ನಡೆದಿದ್ದರೂ, ಈಗ ಅದಕ್ಕೆ ತೆರೆ ಬಿದ್ದಿದೆ. ಈ ಪ್ರೋಮೋದ ಮೂಲಕವೇ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಮನೆಯೊಳಗೆ ಯಾರಿಗೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಗಾಢವಾಗಿದೆ.

ಪ್ರೋಮೋದ ಹಿಂದೆ ಭಾರೀ ಪ್ಲಾನಿಂಗ್, ಸೆಟ್ ನಿರ್ಮಾಣ ಮತ್ತು ಶೂಟಿಂಗ್ ನಡೆದಿದ್ದು, ಅದರ ಝಲಕ್ ನೀಡುವ ವೀಡಿಯೋ ಕೂಡಾ ಬಿಡುಗಡೆ ಮಾಡಲಾಗಿದೆ. ಇದರಿಂದ ಶೋಗೆ ಸಂಬಂಧಿಸಿದ ನಿರೀಕ್ಷೆಗಳು ಗಗನಕ್ಕೇರಿವೆ.

ಇದನ್ನೂ ಓದಿ