ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12 ಪ್ರೇಕ್ಷಕರಿಗೆ ದೊಡ್ಡ ಶಾಕ್ ಕೊಟ್ಟಿದೆ. ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್ ಮನೆಯ ಶೂಟಿಂಗ್‌ಗೆ ದಿಢೀರ್ ಬ್ರೇಕ್ ಹಾಕಲಾಗಿದೆ. ಈಗಾಗಲೇ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಹೊರತಂದು ಬೆಂಗಳೂರಿನ ಸಮೀಪವಿರುವ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.
ಮೂಲಗಳ ಪ್ರಕಾರ, ಬಿಗ್‌ಬಾಸ್ ಸಂಚಿಕೆಗಳು ಇನ್ನು ಕೇವಲ ಮೂರು ದಿನಗಳ ಕಾಲ ಮಾತ್ರ ಪ್ರಸಾರವಾಗಲಿವೆ. ಆ ನಂತರ ಹೊಸ ಎಪಿಸೋಡ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ವಾಹಿನಿ ನಿರ್ಧರಿಸಿದೆ. ಇದರ ಪರಿಣಾಮವಾಗಿ, ವೀಕ್ಷಕರಿಗೆ ತಮ್ಮ ನೆಚ್ಚಿನ ಸ್ಪರ್ಧಿಗಳ ಆಟವನ್ನು ನೋಡಲು ಕೇವಲ ಕೆಲವು ದಿನಗಳಷ್ಟೇ ಅವಕಾಶ ದೊರೆಯಲಿದೆ.
ಮನೆಯೊಳಗಿನ ಆಟಕ್ಕೆ ಸದ್ಯಕ್ಕೆ ಸಂಪೂರ್ಣ ಫುಲ್ ಸ್ಟಾಪ್ ಇಡಲಾಗಿದೆ. ಎಲ್ಲಾ ಸ್ಪರ್ಧಿಗಳನ್ನು ಗೌಪ್ಯವಾಗಿ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹೊರಗಿನ ಜಗತ್ತಿನ ಸಂಪರ್ಕದಿಂದ ಅವರನ್ನು ದೂರ ಇಡಲಾಗಿದೆ. ಸಮಸ್ಯೆ ಬಗೆಹರಿಯುವವರೆಗೆ ಅವರು ಅಲ್ಲಿಯೇ ಉಳಿಯಬೇಕಾಗುತ್ತದೆ.
ಇದಕ್ಕೂ ಮೊದಲು ಬಿಗ್‌ಬಾಸ್ ಸೀಸನ್ 8 ಕೂಡಾ ಕೊರೋನಾ ಮಹಾಮಾರಿಯ ಪರಿಣಾಮದಿಂದ ಅರ್ಧಕ್ಕೆ ನಿಂತಿತ್ತು. ಆಗಲೂ ಸ್ಪರ್ಧಿಗಳನ್ನು ಮನೆಗೆ ಕಳುಹಿಸಿ ನಂತರ “ಸೆಕೆಂಡ್ ಇನ್ನಿಂಗ್ಸ್” ಎಂಬ ಹೆಸರಿನಲ್ಲಿ ಶೋ ಮುಂದುವರಿಸಲಾಯಿತು. ಇದೇ ಮಾದರಿಯನ್ನು ಇದೀಗಲೂ ಅನುಸರಿಸಬಹುದೆಂಬ ಸುಳಿವು ದೊರೆಯುತ್ತಿದೆ.
ಮುಂದೇನು?: ಸಮಸ್ಯೆ ಬಗೆಹರಿದ ಬಳಿಕ ಬಿಗ್‌ಬಾಸ್ ಕಾರ್ಯಕ್ರಮವನ್ನು ಮತ್ತೆ ಇದೇ ಸ್ಪರ್ಧಿಗಳೊಂದಿಗೆ ಮುಂದುವರಿಸುವ ಆಲೋಚನೆ ವಾಹಿನಿಯಲ್ಲಿದೆ. ಪ್ರೇಕ್ಷಕರು ಈಗ ಕಾದಿರುವುದು ಒಂದೇ — ಸ್ಪರ್ಧಿಗಳು ಮತ್ತೆ ಮನೆಗೆ ಯಾವಾಗ ಎಂಟ್ರಿ ಕೊಡುತ್ತಾರೆ ಮತ್ತು ಆಟ ಹೇಗೆ ಮುಂದುವರಿಯುತ್ತದೆ ಎಂಬುದನ್ನು ತಿಳಿದುಕೊಳ್ಳಲು.