ಬಿಜೆಪಿ ಮುಖಂಡ, ಮೀನುಗಾರರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ವಿಧಿವಶ

ಹೊಸದಿಗಂತ ವರದಿ ಮಂಗಳೂರು: ಬಿಜೆಪಿ ಮುಖಂಡ, ಮೀನುಗಾರ ಮುಖಂಡ, ಮೀನುಗಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ಅವರು ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೀನುಗಾರ ಸಮುದಾಯದ ಮುಖಂಡರಾಗಿ, ಸಾಮಾಜಿಕ ಹೋರಾಟಗಾರರಾಗಿದ್ದ ಅವರು ರಂಗಭೂಮಿ ಕಲಾವಿದರಾಗಿಯೂ ಖ್ಯಾತಿ ಪಡೆದಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದ ರಾಮಚಂದರ್ ಬೈಕಂಪಾಡಿ ಅವರು, ಕೆಜೆಪಿ ಪಕ್ಷ ಸೇರಿ ಬಳಿಕ ಬಿಜೆಪಿಗೆ ಮರಳಿದ್ದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಹಾಗೂ ಕೆಜೆಪಿಯಿಂದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. … Continue reading ಬಿಜೆಪಿ ಮುಖಂಡ, ಮೀನುಗಾರರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ವಿಧಿವಶ