June 16, 2026
Tuesday, June 16, 2026
spot_img

ಬಿಜೆಪಿ ಮುಖಂಡ, ಮೀನುಗಾರರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ವಿಧಿವಶ

ಹೊಸದಿಗಂತ ವರದಿ ಮಂಗಳೂರು:

ಬಿಜೆಪಿ ಮುಖಂಡ, ಮೀನುಗಾರ ಮುಖಂಡ, ಮೀನುಗಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ಅವರು ಇಂದು ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೀನುಗಾರ ಸಮುದಾಯದ ಮುಖಂಡರಾಗಿ, ಸಾಮಾಜಿಕ ಹೋರಾಟಗಾರರಾಗಿದ್ದ ಅವರು ರಂಗಭೂಮಿ ಕಲಾವಿದರಾಗಿಯೂ ಖ್ಯಾತಿ ಪಡೆದಿದ್ದರು.

ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದ ರಾಮಚಂದರ್ ಬೈಕಂಪಾಡಿ ಅವರು, ಕೆಜೆಪಿ ಪಕ್ಷ ಸೇರಿ ಬಳಿಕ ಬಿಜೆಪಿಗೆ ಮರಳಿದ್ದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಹಾಗೂ ಕೆಜೆಪಿಯಿಂದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಅವಿವಾಹಿತರಾಗಿದ್ದ ಅವರು, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ನಿಕಟ ಪೂರ್ವ ಸದಸ್ಯರಾಗಿದ್ದ ಅವರು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !