ಕಾಂಗ್ರೆಸ್ ಪೋಸ್ಟರ್ ವಾರ್‌ಗೆ ಮಣಿದ ಬಿಜೆಪಿ ರಾಜ್ಯಾಧ್ಯಕ್ಷ: ಉದ್ದೇಶಪೂರ್ವಕವಾಗಿ ಆ ಪದ ಬಳಸಿಲ್ಲ ಎಂದು ಕ್ಷಮೆ ಕೇಳಿದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಏಕವಚನದಲ್ಲಿ ವಿವಾದಾತ್ಮಕ ಪದಪ್ರಯೋಗ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೊನೆಗೂ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ದಾವಣಗೆರೆಯಲ್ಲಿ ಹಾಲಿನ ದರ ಏರಿಕೆ ಮತ್ತು ಮೀಸಲಾತಿ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, “ಈ ನನ್ನ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ…” ಎಂದು ವಿಜಯೇಂದ್ರ ಏಕವಚನದಲ್ಲಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ನನ್ನದು ಉದ್ದೇಶಪೂರ್ವಕ … Continue reading ಕಾಂಗ್ರೆಸ್ ಪೋಸ್ಟರ್ ವಾರ್‌ಗೆ ಮಣಿದ ಬಿಜೆಪಿ ರಾಜ್ಯಾಧ್ಯಕ್ಷ: ಉದ್ದೇಶಪೂರ್ವಕವಾಗಿ ಆ ಪದ ಬಳಸಿಲ್ಲ ಎಂದು ಕ್ಷಮೆ ಕೇಳಿದ ವಿಜಯೇಂದ್ರ