Tuesday, January 13, 2026
Tuesday, January 13, 2026
spot_img

Body Care | ಕೊರೆವ ಚಳಿಯಲ್ಲಿ ತ್ವಚೆ ಹೊಳೆಯಲು, ಸ್ನಾಯುಗಳು ಬಲಗೊಳ್ಳಲು ಎಳ್ಳೆಣ್ಣೆಯೇ ಮದ್ದು!

ಚಳಿಗಾಲದ ಆಗಮನದೊಂದಿಗೆ ಚರ್ಮವು ಒಣಗಿ, ಶುಷ್ಕತೆ ಹೆಚ್ಚಾಗುವುದು ಸಾಮಾನ್ಯ. ಈ ಕೊರೆವ ಚಳಿಯಲ್ಲಿ ತ್ವಚೆಯ ಆರೈಕೆಗೆ ವಿಶೇಷ ಗಮನ ನೀಡಬೇಕು. ಇದಕ್ಕಾಗಿ ಬಹುತೇಕರು ವಿವಿಧ ರೀತಿಯ ಬಾಡಿ ಲೋಷನ್‌ಗಳು ಮತ್ತು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಸ್ನಾನಕ್ಕೂ ಮೊದಲು ಕೇವಲ ಒಂದು ಎಣ್ಣೆಯನ್ನು ಮೈಗೆ ಹಚ್ಚಿ ಮಸಾಜ್ ಮಾಡುವುದರಿಂದ ತ್ವಚೆಯ ಕಾಂತಿ ಅಸಾಧಾರಣವಾಗಿ ಹೆಚ್ಚುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಹೌದು, ಆ ಅಮೂಲ್ಯ ಎಣ್ಣೆ ಬೇರೆ ಯಾವುದೂ ಅಲ್ಲ, ಅದುವೇ ಎಳ್ಳೆಣ್ಣೆ.

ಆಯುರ್ವೇದವು ಎಳ್ಳೆಣ್ಣೆಯನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಲು ಶಿಫಾರಸು ಮಾಡುತ್ತದೆ. ಸ್ನಾನ ಮಾಡುವ ಮುನ್ನ ಈ ಎಣ್ಣೆಯಿಂದ ದೇಹಕ್ಕೆ ಲಘು ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ:

ತ್ವಚೆಯ ಕಾಂತಿ ಮತ್ತು ತೇವಾಂಶ: ಇದು ಚರ್ಮದ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಆಳವಾದ ತೇವಾಂಶವನ್ನು ಒದಗಿಸುತ್ತದೆ. ಇದರಿಂದ ಚಳಿಗಾಲದ ಶುಷ್ಕತೆ ಮತ್ತು ಚರ್ಮದ ಇತರ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ರಕ್ತ ಪರಿಚಲನೆ ಸುಧಾರಣೆ: ಲಘು ಮಸಾಜ್ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.

ದೇಹ ಮತ್ತು ಮನಸ್ಸಿಗೆ ಉಲ್ಲಾಸ: ಇದು ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿ ಮತ್ತು ಉಲ್ಲಾಸವನ್ನು ನೀಡುತ್ತದೆ.

ಪ್ರತಿದಿನ ಸ್ನಾನಕ್ಕೆ ಹೋಗುವ ಮೊದಲು, ಎಳ್ಳೆಣ್ಣೆಯನ್ನು ಇಡೀ ದೇಹಕ್ಕೆ ನಿಧಾನವಾಗಿ ಹಚ್ಚಿ 10-15 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಈ ಅಭ್ಯಾಸವು ಕೇವಲ ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸವನ್ನೂ ನೀಡುತ್ತದೆ.

ಆಯುರ್ವೇದ ತಜ್ಞರ ಪ್ರಕಾರ, ಎಳ್ಳೆಣ್ಣೆಯು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ.

ನಿಯಮಿತ ಮಸಾಜ್‌ನಿಂದ ದೊರೆಯುವ ಇತರೆ ಪ್ರಮುಖ ಪ್ರಯೋಜನಗಳು:

ಸ್ನಾಯುಗಳನ್ನು ಬಲಪಡಿಸುವುದು.

ಕೀಲು ನೋವು ಮತ್ತು ಆಯಾಸವನ್ನು ಕಡಿಮೆ ಮಾಡುವುದು.

ಮಾನಸಿಕ ಒತ್ತಡವನ್ನು ನಿವಾರಿಸುವುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

Most Read

error: Content is protected !!