Tuesday, September 9, 2025

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಐಶ್ವರ್ಯ ರೈ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಲು ಮುಖ್ಯ ಕಾರಣ ನಟಿಯ ಫೋಟೋ, ಹೆಸರು ದುರ್ಬಳಕೆ, ಎಐ ಮೂಲಕ ನಟಿ ಫೋಟೋ, ವಿಡಿಯೋ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರುವವ ವಿರುದ್ದ.

ಐಶ್ವರ್ಯ ರೈ ಬಚ್ಚನ್ ಹಲವು ವಿಚಾರಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೇಶಾದ್ಯಂತ ಐಶ್ವರ್ಯ ರೈ ಬಚ್ಚನ್ ಹೆಸರು, ಫೋಟೋ, ವಿಡಿಯೋ ಬಳಸಿಕೊಂಡು ಜಾಹೀರಾತು, ಉತ್ಪನ್ನಗಳ ಪ್ರಚಾರ ಮಾಡಲಾಗುತ್ತಿದೆ. ಅಕ್ರಮವಾಗಿ ಈ ರೀತಿ ಫೋಟೋ, ವಿಡಿಯೋ ಬಳಸಿಕೊಳ್ಳಲಾಗುತ್ತಿದೆ. ಇನ್ನು ಹಲವು ಕಡೆ ಫೋಟೋ, ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಐ ಮೂಲಕ ಫೋಟೋ,ವಿಡಿಯೋ ಸೃಷ್ಟಿಸಿ ಸೋಶಿಯಲ್ ಮೀಡಿಯಾ ಮೂಲಕವೂ ದುರ್ಬಳಕೆ ಮಾಡುತ್ತಿದ್ದಾರೆ. ಐಶ್ವರ್ಯ ರೈಗೆ ಸಂಬಂಧ ಪಡದ, ಯಾವುದೇ ಒಪ್ಪಂದ ಮಾಡಿಕೊಳ್ಳದೇ ಈ ರೀತಿ ದುರ್ಬಳಕೆ ಆಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಐ ಮೂಲಕ ಸೃಷ್ಟಿಸಿಲಾಗಿರುವ ಕೆಟ್ಟ ಫೋಟೋಗಳು, ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದರಿಂದ ನಟಿಯ ವ್ಯಕ್ತಿತ್ವ, ಸಾಮಾಜಿಕ ಬದ್ಥತೆ ಮೇಲೆ ಪರಿಣಾಮ ಬೀರುತ್ತಿದೆ. ಅಕ್ರಮ ಹಾಗೂ ಗುಣಮಟ್ಟವಿಲ್ಲದ ಉತ್ಪನ್ನಗಳಲ್ಲೂ ಅಕ್ರಮವಾಗಿ ನಟಿಯ ಫೋಟೋ, ಹೆಸರು ಬಳಸಿಕೊಳ್ಳಲಾಗುತ್ತದೆ. ಇದರಿಂದ ಜನರು ಮೋಸಹೋಗುತ್ತಿರುವುದು ಮಾತ್ರವಲ್ಲ, ನಟಿ ಹೆಸರಿಗೆ ತೇಜೋವಧೆಯಾಗುತ್ತಿದೆ. ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಐಶ್ವರ್ಯ ರೈ ಬಚ್ಚನ್ ಅರ್ಜಿ ಕೈಗೆತ್ತಿಕೊಂಡ ಜಸ್ಟೀಸ್ ತೇಜಸ್ ಕಾರಿಯಾ, ಅರ್ಜಿದಾರರು ಉಲ್ಲೇಖಿಸಿದ ಗಂಭೀರ ವಿಚಾರಗಳ ಕುರಿತು ಸೂಕ್ತ ಕ್ರಮದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ