Saturday, September 20, 2025

ಬಾಲಿವುಡ್ ನಟಿ ದಿಶಾ ಪಟಾನಿ ಮನೆ ಮೇಲೆ ದಾಳಿ: ಇಬ್ಬರು ಬಾಲಾಪರಾಧಿಗಳ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ದಿಶಾ ಪಟಾನಿ ಅವರ ಉತ್ತರಪ್ರದೇಶದ ಬರೇಲಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಇಬ್ಬರು ಬಾಲಾಪರಾಧಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ದೆಹಲಿ ಪೊಲೀಸ್ ವಿಶೇಷ ಘಟಕ, ಹರಿಯಾಣ ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಜೊತೆಗೆ ಬುಧವಾರ ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ಇಬ್ಬರು ಶೂಟರ್‌ಗಳು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದರು.

ಇದೀಗ ನಟಿಯ ಬರೇಲಿ ನಿವಾಸದ ದಾಳಿಗೆ ಸಂಬಂಧಿಸಿ ದೆಹಲಿಯ ಗುಪ್ತಚರ ತಂಡವು ಇಬ್ಬರು ಅಪ್ರಾಪ್ತ ಶೂಟರ್‌ಗಳನ್ನು ಬಂಧಿಸಿದೆ. ಈ ಇಬ್ಬರ ಬಂಧನಕ್ಕೂ ಬಹುಮಾನ ಘೋಷಿಸಲಾಗಿತ್ತು. ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸುವಾಗ ಪೊಲೀಸರು ಸಿಸಿಟಿವಿ ದೃಶ್ಯಗಳಲ್ಲಿ ಅವರನ್ನು ಪತ್ತೆ ಮಾಡಿದ್ದು, ಬಳಿಕ ಬಂಧಿಸಲಾಗಿದೆ. ಇಬ್ಬರನ್ನು ಪೊಲೀಸರು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ