Monday, September 15, 2025

BOMB THREAT | ದೆಹಲಿಯ 6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದೆಹಲಿಯ ಆರು ಶಾಲೆಗಳಿಗೆ ಬೆಳಗ್ಗೆ 6:35 ರಿಂದ 7:48ರ ನಡುವೆ ಬಾಂಬ್ ಬೆದರಿಕೆಗೆ ಸಂಬಂಧಿಸಿದ ಕರೆಗಳು, ಇಮೇಲ್ ಬಂದಿವೆ. ಇವುಗಳಲ್ಲಿ ಪ್ರಸಾದ್ ನಗರದಲ್ಲಿರುವ ಆಂಧ್ರ ಶಾಲೆ, ಬಿಜಿಎಸ್ ಇಂಟರ್‌ನ್ಯಾಷನಲ್ ಶಾಲೆ, ರಾವ್ ಮಾನ್ ಸಿಂಗ್ ಶಾಲೆ, ಕಾನ್ವೆಂಟ್ ಶಾಲೆ, ಮ್ಯಾಕ್ಸ್ ಫೋರ್ಟ್ ಶಾಲೆ ಮತ್ತು ದ್ವಾರಕಾದ ಇಂದ್ರಪ್ರಸ್ಥ ಅಂತರರಾಷ್ಟ್ರೀಯ ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಪೊಲೀಸ್ ತಂಡಗಳು ತಕ್ಷಣ ಆವರಣಕ್ಕೆ ಧಾವಿಸಿ, ಶೋಧ ಕಾರ್ಯ ನಡೆಸುತ್ತಿವೆ.

ಇದನ್ನೂ ಓದಿ