ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿ: 9 ಬಾರಿ ಇರಿದು ಕೊಂದ ಗೆಳೆಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು ವ್ಯಕ್ತಿ ಒಂಭತ್ತು ಬಾರಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದಾನೆ. ಆ ಬಳಿಕ ತಾನು ಕೂಡ ಇರಿದುಕೊಂಡಿದ್ದಾನೆ. ಈ ಘಟನೆಯು ಬೆಳಗಾವಿಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.

ಆನಂದ ಸುತಾರ್ (31 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ತಿರವಿರ (30 ವರ್ಷ) ಕೊಲೆಯಾದವರು.

ಈ ಇಬ್ಬರಿಗೂ ಮದುವೆ ಆಗಿ ಮಕ್ಕಳಿದ್ದಾರೆ. ಆದರೂ ಅನೈತಿಕ ಸಂಬಂಧ ಬೆಳೆಸಿದ್ದರು. ಈ ಇಬ್ಬರು ಕಳೆದ ತಿಂಗಳು ಗಂಡನ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಕೊಂಡಿದ್ದರು. ಗಂಡ ಈ ಬಗ್ಗೆ ಪೊಲೀಸರಿಗೆ ಹೇಳಿದ್ದರು. ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದು ಆದ್ಮೇಲೆ ಮಹಿಳೆ ಅಂತರ ಕಾಯ್ದುಕೊಂಡಿದ್ದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ.

ಆನಂದ್ ಸುತಾರ್ ಮದುವೆ ಬಳಿಕವೂ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇಬ್ಬರು ಕಳೆದ ಮೂರು ವರ್ಷಗಳಿಂದ ಸಲುಗೆ ಬೆಳೆಸಿಕೊಂಡಿದ್ದರು. ನನ್ನ ಹೆಂಡತಿಯಂತೆ ನೀನೂ, ನನ್ನ ಮಾತುಗಳನ್ನ ಕೇಳಬೇಕು ಎಂದು ಪ್ರೇಯಸಿಗೆ ಪೀಡಿಸುತ್ತಿದ್ದನು. ಆನಂದ್​ಗೆ 3 ಮಕ್ಕಳು, ಮೃತ ಮಹಿಳೆಗೆ ಇಬ್ಬರು ಮಕ್ಕಳು ಇದ್ದಾರೆ.

ಇದರಿಂದ ತೀವ್ರವಾಗಿ ಭಯಗೊಂಡು ಬಳಿಕ ತಾನು ಕೂಡ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!