ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ: ನ್ಯಾಯಕ್ಕಾಗಿ ಯುವತಿ ಆಗ್ರಹ

ಹೊಸದಿಗಂತ ವರದಿ ಹಾಸನ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಹಾಸನ ಜಿಲ್ಲೆಯ ಸಾಲಗಾಮೆ ಗ್ರಾಮದ ಪ್ರದೀಪ್ ಎಂಬ ಯುವಕನ ವಿರುದ್ಧ ಯುವತಿಯೊಬ್ಬರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿ, ಪ್ರದೀಪ್ ಎಂಬುವವರೊಂದಿಗೆ ಪರಿಚಯವಾಗಿ, ಬಳಿಕ ಅದು ಸ್ನೇಹವಾಗಿ, ನಂತರ ಪ್ರೇಮಕ್ಕೆ ತಿರುಗಿತ್ತು. ಇದೇ ವೇಳೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ತಾನು ಗರ್ಭಿಣಿಯಾದಾಗ ಮದುವೆಯಾಗಬೇಕಾದರೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರಿಂದ, ಆತನ ಮಾತಿನಂತೆ ಗರ್ಭಪಾತ ಮಾಡಿಸಿಕೊಂಡಿದ್ದೇನೆ. ನಂತರ ಮದುವೆಯಾಗುವಂತೆ … Continue reading ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ: ನ್ಯಾಯಕ್ಕಾಗಿ ಯುವತಿ ಆಗ್ರಹ