Saturday, September 20, 2025

ರಾಜ್ಯಕ್ಕೂ ಕಾಲಿಡ್ತಾ ಮೆದುಳು ತಿನ್ನುವ ಅಮೀಬಾ ಸೋಂಕು??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆದುಳು ತಿನ್ನುವ ಅಮೀಬಾ ಕೇರಳ ಸರ್ಕಾರ ನಿದ್ದೆ ಕೆಡಿಸಿದ್ದು, ಸೋಂಕಿಗೆ ಈ ವರೆಗೂ 19ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ನಡುವೆ ಸೋಂಕು ಕುರಿತು ರಾಜ್ಯದಲ್ಲೂ ಆತಂಕ ಶುರುವಾಗಿದ್ದು, ಸೋಂಕು ಕುರಿತು ಜಾಗೃತಿ ಹಾಗೂ ಸೋಂಕು ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಆರೋಗ್ಯ ತಜ್ಞರು ಒತ್ತಿ ಹೇಳಿದ್ದಾರೆ.

ರಾಜ್ಯದಲ್ಲಿ ಈವರೆಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ. ಜನರು ತಮ್ಮ ಆರೋಗ್ಯದ ಬಗ್ಗೆ ಗಮನನೀಡಬೇಕು. ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದಿದ್ದಾರೆ.

ನೇಗ್ಲೇರಿಯಾ ಫೌಲೇರಿ ಅಮೀಬಾದಿಂದ ಉಂಟಾಗುವ ಅಮೀಬಿಕ್ ಎನ್ಸೆಫಾಲಿಟಿಸ್ ಕಲುಷಿತ ನೀರಿಗೆ ಒಡ್ಡಿಕೊಂಡ ಒಂದರಿಂದ ಒಂಬತ್ತು ದಿನಗಳ ನಂತರ ಬೆಳವಣಿಗೆಯಾಗುತ್ತದೆ. ಸೋಂಕು ಮೂಗಿನ ಕುಹರದ ಮೂಲಕ ಪ್ರವೇಶಿಸುತ್ತದೆ. ವೇಗವಾಗಿ ಮಿದುಳು ಪ್ರವೇಶಿಸಿ, ಮಾರಕವಾಗಿ ಪರಿಣಮಿಸಲಿದೆ. ಸೋಂಕಿಗೊಳಗಾದವರಲ್ಲಿ ಅತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಸಮತೋಲನ ನಷ್ಟ, ರೋಗಗ್ರಸ್ತವಾಗುವ ಸೋಂಕುಗಳು ಪತ್ತೆಯಾಗುತ್ತವೆ. ತೀವ್ರತರ ಪ್ರಕರಣಗಳಲ್ಲಿ ಜನರು ಕೋಮಾಗೂ ಜಾರಲಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಕಲುಷಿತ ಈಜುಕೊಳಗಳಲ್ಲಿ ಈಜುವುದನ್ನು ತಪ್ಪಿಸಿ. ಈಜುಕೊಳಕ್ಕೆ ಇಳಿಯುವವರು ಮೂಗಿನ ಕ್ಲಿಪ್‌ಗಳನ್ನು ಬಳಸುವುದರಿಂದ ಅಮೀಬಾ ಮೂಗಿನ ಮಾರ್ಗಗಳ ಮೂಲಕ ಪ್ರವೇಶಿಸುವುದನ್ನು ತಡೆಯಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಕೆರೆಗಳಿಗೆ ಇಳಿಯುವುದು, ಈಜುಕೊಳಗಳಿಗೆ ಇಳಿಯುವುದನ್ನು ನಿಯಂತ್ರಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ