Sunday, January 11, 2026

ಚಿರಂಜೀವಿ ಸಿನಿಮಾ ರೇಟಿಂಗ್‌ಗಳಿಗೆ ಬ್ರೇಕ್: ಫ್ಯಾನ್ ವಾರ್ ತಪ್ಪಿಸೋಕೆ ಹೊಸ ತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ನಿರಾಶೆ ನೀಡಿದೆ. ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರೇಟಿಂಗ್ ಅಥವಾ ವಿಮರ್ಶೆ ನೀಡಲು ಸಾಧ್ಯವಾಗದಂತೆ ಕೋರ್ಟ್ ಆದೇಶ ಜಾರಿಯಾಗಿದೆ.

ಕೋರ್ಟ್ ಆದೇಶದ ಮೇರೆಗೆ, BookMyShow ಸೇರಿದಂತೆ ಆನ್‌ಲೈನ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರಕ್ಕೆ ರೇಟಿಂಗ್ ಹಾಗೂ ವಿಮರ್ಶೆ ನೀಡುವ ಆಯ್ಕೆಯನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಸಿನಿಮಾ ಬಿಡುಗಡೆಯ ಸಮಯದಲ್ಲಿ ಉಂಟಾಗುವ ಅನಾವಶ್ಯಕ ಅಪಪ್ರಚಾರ ಮತ್ತು ಉದ್ದೇಶಪೂರ್ವಕ ನೆಗೆಟಿವ್ ಕ್ಯಾಂಪೇನ್ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: FOOD | ಸ್ಪೈಸಿ ಗೋಬಿ ಪೆಪ್ಪರ್ ಡ್ರೈ ತಿಂದಿದ್ದೀರಾ? ಇಲ್ಲಿದೆ ನೋಡಿ ರೆಸಿಪಿ

ಈ ಮೊದಲು ದರ್ಶನ್ ನಟನೆಯ ‘ದಿ ಡೆವಿಲ್’, ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಹಾಗೂ ಶಿವರಾಜ್‌ಕುಮಾರ್ ಅವರ ‘45’ ಚಿತ್ರಗಳಿಗೂ ಇದೇ ರೀತಿಯ ನಿರ್ಬಂಧ ಜಾರಿಗೊಂಡಿತ್ತು. ಸ್ಟಾರ್ ಸಿನಿಮಾಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಫ್ಯಾನ್ ವಾರ್ ಹಾಗೂ ನಕಲಿ ರೇಟಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಚಿತ್ರತಂಡಗಳು ಕೋರ್ಟ್ ಮೊರೆ ಹೋಗುತ್ತಿವೆ.

‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದು, ಶೈನ್ ಸ್ಕ್ರೀನ್ಸ್ ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೇನ್ಮೆಂಟ್ ನಿರ್ಮಾಣ ಮಾಡಿವೆ. ಚಿರಂಜೀವಿ ಜೊತೆಗೆ ನಯನತಾರಾ ಹಾಗೂ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!