ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ, ರನ್ ಡಿಕ್ಟ್ಸ್ ಫೌಂಡೇಶನ್ ಸಹಯೋಗದೊಂದಿಗೆ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರಂಭಿಕ ಪತ್ತೆಹಚ್ಚುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, 5K ವಾಕಥಾನ್ ಪಿಂಕ್ ಸ್ಟ್ರ್ಯೆಡ್ – ವಾಕ್ ಫಾರ್ ಹರ್ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸಂಸದ ತೇಜಸ್ವಿಸೂರ್ಯ ಮತ್ತು ಕನಕಪುರ ರಸ್ತೆಯ ಮಣಿಪಾಲ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಮೋಹನ್ ಹರಿಹರನ್ ಮತ್ತು ತಂಡ ವಾಕಥಾನ್ ಗೆ ಚಾಲನೆ ನೀಡಿದರು. ವೈದ್ಯರು, ಕ್ಯಾನ್ಸರ್ ಜಯಿಸಿದವರು ಮತ್ತು ಅವರ ಕುಟುಂಬ ಸದಸ್ಯರು ನಾಗರಿಕರು ಪಾಲ್ಗೊಂಡಿದ್ದರು.
ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಲೇ ಇವೆ, ಇತ್ತೀಚಿನ ಅಂದಾಜಿನ ಪ್ರಕಾರ ಸುಮಾರು 2.38 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇದು ಭಾರತೀಯ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಅರಿವಿನ ಕೊರತೆ ಮತ್ತು ಸಾಮಾಜಿಕ ಕಳಂಕ ಎಂದು ಹೆದರಿ ತಪಾಸಣೆಗೆ ಹಿಂಜರಿಯುತ್ತಿದ್ದು, ಅನೇಕ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮುಂದುವರಿದ (ಅಡ್ವಾನ್ಸ್ಡ್) ಹಾಗೂ ಚಿಕಿತ್ಸೆಯು ಹೆಚ್ಚು ಜಟಿಲ ಎಂದು ಪರಿಗಣಿಸುವ ಹಂತಗಳಲ್ಲಿ ಪತ್ತೆಯಾಗುತ್ತದೆ. ಈ ನಿಟ್ಟಿನಲ್ಲಿ, ಪಿಂಕ್ ಸ್ಟ್ರ್ಯೆಡ್ ಅನ್ನು ಮ್ಯಾಮೊಗ್ರಫಿ, ಸ್ತನ ಸ್ವಯಂ ಪರೀಕ್ಷೆಗಳು ಮತ್ತು ಸಮಗ್ರ ಕ್ಯಾನ್ಸರ್ ಆರೈಕೆಯ ಲಭ್ಯತೆಗಾಗಿ ಪೂರ್ವಭಾವಿ ಆರೋಗ್ಯ ತಪಾಸಣೆಯನ್ನು ಪ್ರೊತ್ಸಾಹಿಸುವ ಮತ್ತು ಭಯವನ್ನು ಭರವಸೆಯಾಗಿ ಪರಿವರ್ತಿಸಬಹುದಾದ ಅಭಿಯಾನವಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ಬಟ್ಟೆ ಧರಿಸಿ ಧೃಢ ನಿಶ್ಚಯದ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದ ಸುಮಾರು 1800 ಜನರು ಒಟ್ಟಿಗೆ ನಡೆದರು. ಭರವಸೆ,ತಪಾಸಣೆ ಮತ್ತು ಪೂರ್ವಭಾವಿ ಕ್ಯಾನ್ಸರ್ ತಪಾಸಣೆಗಳ ಮೂಲಕ ಜೀವ ಉಳಿಸುವ ಪರಿಣಾಮವನ್ನು ಬಲಪಡಿಸಿದರು.
ಈ ವೇಳೆ ಮಾತನಾಡಿದ ತೇಜಸ್ವಿಸೂರ್ಯ,ಪಿಂಕ್ ಸ್ಟ್ರ್ಯೆಡ್ ಅಂತಹ ಕಾರ್ಯಕ್ರಮಗಳು, ಸಮುದಾಯಗಳು ಒಂದು ದೊಡ್ಡ ಕಾರಣಕ್ಕಾಗಿ ಒಟ್ಟಿಗೆ ಸೇರುವ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಕ್ಯಾನ್ಸರ್ಆರೈಕೆ ಆಸ್ಪತ್ರೆಗಳನ್ನು ಮೀರಿ ಹೋಗುತ್ತದೆ. ಇದು ಜಾಗೃತಿ, ನಿಯಮಿತ ತಪಾಸಣೆ ಮತ್ತು ಈ ರೋಗವನ್ನು ಸುತ್ತುವರೆದಿರುವ ಕಳಂಕವನ್ನು ಮುರಿಯುವುದರೊಂದಿಗೆ ಪ್ರಾರಂಭವಾಗುತ್ತದೆ. ಇಂದಿನ ನಡಿಗೆ ನಾವು ಒಟ್ಟಾಗಿ ಆರೋಗ್ಯಕರ, ಹೆಚ್ಚು ಮಾಹಿತಿಯುಕ್ತ ಸಮಾಜವನ್ನು ರಚಿಸಬಹುದು ಎಂಬ ಸಂದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮೋನಿಕಾಪನ್ಸಾರಿ, ಲೀಡ್ ಸರ್ಜಿಕಲ್ ಆಂಕೊಲಾಜಿಸ್ಟ್, ಸ್ತನ ಮತ್ತು ಗೈನೆ ಆಂಕೊಸರ್ಜನ್ ಮತ್ತು ರೊಬೊಟಿಕ್ಸರ್ಜನ್, ಮಣಿಪಾಲ್
ಆಸ್ಪತ್ರೆ, ಸ್ತನ ಕ್ಯಾನ್ಸರ್ ಆರಂಭಿಕಹಂತದಲ್ಲಿಯೇ ಪತ್ತೆಹಚ್ಚಿದಾಗ, ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗುತ್ತವೆ ಮತ್ತು ಬದುಕುಳಿಯುವ ಸಾಧ್ಯತೆಗಳು ಹೆಚ್ಚು. ವಾಸ್ತವವಾಗಿ, ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಿದ ಮಹಿಳೆಯರು 5 ವರ್ಷಗಳನ್ನುಮೀರಿ ಬದುಕುವ ಸಾಧ್ಯತೆ 90% ಕ್ಕಿಂತ ಹೆಚ್ಚು. 40 ವರ್ಷದ ನಂತರ ವಾರ್ಷಿಕವಾಗಿ ಸರಳ ಪರೀಕ್ಷೆಯಾದ ಮ್ಯಾಮೊಗ್ರಾಮ್ ಗೆ ಒಳಗಾಗುವುದರ ಮೂಲಕ, ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚ ಬಹುದಾಗಿದೆ, ಆಗ ಬದುಕುಳಿಯುವಿಕೆಯ ಪ್ರಮಾಣ 90% ಕ್ಕಿಂತ ಹೆಚ್ಚಾಗಿರುತ್ತದೆ. ಪಿಂಕ್ ಸ್ಟ್ರ್ಯೆಡ್ ನೊಂದಿಗೆ , ಪ್ರತಿಯೊಬ್ಬ ಮಹಿಳೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವ, ಭರವಸೆಯನ್ನು ಪ್ರೇರೇಪಿಸುವ ಮತ್ತು ಜೀವಗಳನ್ನು ಉಳಿಸುವ ಆಂದೋಲನವನ್ನು ನಾವು ರಚಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಮಣಿಪಾಲ್ಆಸ್ಪತ್ರೆಗಳ ಕ್ಯಾನ್ಸರ್ ವೈದರುಳಾದ, ಡಾ. ಅಕ್ಷತಾ ನಾಯಕ್, ಕನ್ಸಲ್ಟೆಂಟ್ – ಕ್ಲಿನಿಕಲ್ ಹೆಮಟಾಲಜಿ ಮತ್ತು ಹೆಮಟೊ-ಆಂಕೊಲಾಜಿ, ಡಾ. ನಿತಿನ್ ಯಶಸ್ ಕನ್ಸಲ್ಟೆಂಟ್ – ವೈದ್ಯಕೀಯ ಆಂಕೊಲಾಜಿ, ಡಾ. ಶ್ರೀವಲ್ಲಿ ಎ ಕನ್ಸಲ್ಟೆಂಟ್ – ವೈದ್ಯಕೀಯ ಆಂಕೊಲಾಜಿ, ಡಾ. ಪ್ರಜ್ಞಾ ಕೋಕಾ, ಕನ್ಸಲ್ಟೆಂಟ್ – ವೈದ್ಯಕೀಯ ಆಂಕೊಲಾಜಿ, ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಯಾನ್ಸರ್ ಆರೈಕೆ ಕೇವಲ ಚಿಕಿತ್ಸೆಗೆ ಸೀಮಿತವಾಗಿಲ್ಲ, ಜಾಗೃತಿ, ತಡೆಗಟ್ಟುವಿಕೆ, ಜೀವನ ಶೈಲಿ ಬದಲಾವಣೆಗಳು ಮತ್ತು ಸಕಾಲಿಕ ತಪಾಸಣೆಗಳಿಗೆ ವಿಸ್ತರಿಸುತ್ತದೆ ಎಂಬ ಆಸ್ಪತ್ರೆಯ ಸಂದೇಶವನ್ನು ಅವರು ಬಲಪಡಿಸಿದರು.
ಇವೆಲ್ಲವೂ ಬದುಕುಳಿಯುವಿಕೆಯ ಪ್ರಮಾಣ ಮತ್ತು ಜೀವನದಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂಬುದನ್ನು ಅವರು ಅನುಮೋದಿಸಿದರು.
ಕ್ಯಾನ್ಸರ್ವೀರರು, ವೈದ್ಯಕೀಯತಜ್ಞರು ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಈ ವಾಕಥಾನ್ ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ಆರೈಕೆಯನ್ನು ಮುಂದುವರೆಸುವ ಮತ್ತು ಬಲವಾದ ಸಮುದಾಯ ಪಾಲುದಾರಿಕೆಯನ್ನು ನಿರ್ಮಿಸುವ ಬದ್ಧತೆಯನ್ನು ಬಲಪಡಿಸಿತು. ಪಿಂಕ್ ಸ್ಟ್ರ್ಯೆಡ್ – ವಾಕ್ ಫಾರ್ ,ಸ್ತನ ಕ್ಯಾನ್ಸರ್ ರೋಗಿ ಗಳು ಮತ್ತು ಬದುಕುಳಿದವರೊಂದಿಗೆ ಒಗ್ಗಟ್ಟಿನ ಸಾಂಕೇತಿಕಪ್ರ ದರ್ಶನ ಮಾತ್ರವಲ್ಲದೆ, ಕ್ಯಾನ್ಸರ್ ಸುತ್ತಲಿನ ಸಂಭಾಷಣೆಗಳನ್ನು ಸಾಮಾನ್ಯೀಕರಿಸುವ, ಕಳಂಕವನ್ನು ಕಡಿಮೆ ಮಾಡುವ ಮತ್ತು ಪೂರ್ವಭಾವಿ ಆರೋಗ್ಯಕ್ರಮಗಳನ್ನು ಪ್ರೋತ್ಸಾಹಿಸುವ ತುರ್ತು ಅಗತ್ಯದ ಬಲವಾದ ಜ್ಞಾಪನೆಯಾಗಿದೆ.