ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್: 18 ಸಾ*ವು, ಹಲವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳದ ಧಾಡಿಂಗ್ ಜಿಲ್ಲೆಯ ಗಜುರಿ ಸಮೀಪ ಸೋಮವಾರ ಮುಂಜಾನೆ ಭೀಕರ ಬಸ್ ಅಪಘಾತ ಸಂಭವಿಸಿದೆ. ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಪ್ರಯಾಣಿಕರ ಬಸ್ ಪೃಥ್ವಿ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಉರುಳಿಬಿದ್ದಿದೆ. ಘಟನೆ ವೇಳೆ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಿಂದ 18 ಮೃತದೇಹಗಳನ್ನು ಹೊರತೆಗೆದಿರುವುದಾಗಿ ಸಶಸ್ತ್ರ ಪೊಲೀಸ್ ಪಡೆ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆ, ಪೊಲೀಸರು … Continue reading ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್: 18 ಸಾ*ವು, ಹಲವರಿಗೆ ಗಂಭೀರ ಗಾಯ