March 12, 2026
Thursday, March 12, 2026
spot_img

ನೇಪಾಳದ ತ್ರಿಶೂಲಿ ನದಿಗೆ ಉರುಳಿದ ಬಸ್: 18 ಸಾ*ವು, ಹಲವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ಧಾಡಿಂಗ್ ಜಿಲ್ಲೆಯ ಗಜುರಿ ಸಮೀಪ ಸೋಮವಾರ ಮುಂಜಾನೆ ಭೀಕರ ಬಸ್ ಅಪಘಾತ ಸಂಭವಿಸಿದೆ.

ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಪ್ರಯಾಣಿಕರ ಬಸ್ ಪೃಥ್ವಿ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಉರುಳಿಬಿದ್ದಿದೆ. ಘಟನೆ ವೇಳೆ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತ ಸ್ಥಳದಿಂದ 18 ಮೃತದೇಹಗಳನ್ನು ಹೊರತೆಗೆದಿರುವುದಾಗಿ ಸಶಸ್ತ್ರ ಪೊಲೀಸ್ ಪಡೆ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆ, ಪೊಲೀಸರು ಹಾಗೂ ಸಶಸ್ತ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾತ್ರಿ ಸಮಯದಲ್ಲಿ ಘಟನೆ ಸಂಭವಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಯಿತು.

ಇದನ್ನೂ ಓದಿ:

ಮೃತರಲ್ಲಿ ನ್ಯೂಜಿಲೆಂಡ್ ಪ್ರಜೆಯೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನ್ ಹಾಗೂ ನೆದರ್ಲ್ಯಾಂಡ್ಸ್ ದೇಶಗಳ ಪ್ರವಾಸಿಗರು ಇದ್ದಾರೆ. ಬಸ್‌ನಲ್ಲಿ ಸುಮಾರು 40ರಿಂದ 45 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ.

ವಾಹನವು ರಸ್ತೆಯಿಂದ ಜಾರಿ ಸುಮಾರು 300 ಮೀಟರ್ ಇಳಿಜಾರಿನಲ್ಲಿ ನದಿಯ ದಡಕ್ಕೆ ಬಿದ್ದಿದ್ದು, ಬಸ್ ಸಂಪೂರ್ಣ ಹಾನಿಗೊಂಡಿದೆ. ಅಪಘಾತದ ನಿಖರ ಕಾರಣ ಪತ್ತೆಗೆ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !