ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವಾರು ದಿನಗಳಿಂದ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಕಡಿತ ಕಂಡಿದೆ. ನಿನ್ನೆ 11,900 ರೂ ಗಡಿಗಿಂತ ಏರಿದ್ದ ಚಿನ್ನದ ಬೆಲೆಯಲ್ಲಿ ಇಂದು 55 ರೂಗಳಷ್ಟು ಕಡಿಮೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರೆಟ್ ಚಿನ್ನದ ಬೆಲೆ 1,08,800 ರೂಪಾಯಿ ಇದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 1,18,690 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,08,880 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 15,300 ರೂಪಾಯಿಯಲ್ಲಿ ಇದೆ.
ಬೆಳ್ಳಿ ದರದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಳ ಕಂಡು ಬಂದಿದೆ. 10 ಗ್ರಾಂ ಬೆಳ್ಳಿಯ ಬೆಲೆ 1,530 ರೂಪಾಯಿ ಇದ್ದು, 1 ಕೆಜಿ ಬೆಳ್ಳಿ 1,53,000 ರೂಪಾಯಿಗೆ ವ್ಯಾಪಾರವಾಗುತ್ತಿದೆ.
ಚಿನ್ನದ ದರದಲ್ಲಿ ಕಂಡುಬಂದ ಇಳಿಕೆ, ಹೂಡಿಕೆದಾರರಿಗಾಗಿ ಉತ್ತಮ ಅವಕಾಶವನ್ನು ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆ ಬದಲಾವಣೆಗಳು ಮತ್ತು ಆರ್ಥಿಕ ಸೂಚಕಗಳ ಪ್ರಭಾವದಿಂದ ಬೆಲೆಗಳಲ್ಲಿ ಮತ್ತಷ್ಟು ಬದಲಾವಣೆ ಸಂಭವಿಸಬಹುದು ಎಂಬುದನ್ನು ತಜ್ಞರು ಎಚ್ಚರಿಸಿದ್ದಾರೆ.