ಹೊಸದಿಗಂತ ವರದಿ ಕುಶಾಲನಗರ:
ದ್ವಿಚಕ್ರ ವಾಹನ ಸವಾರಿ ವೇಳೆ ಲಾಂಗ್ ಪ್ರದರ್ಶಿಸಿ ರೀಲ್ಸ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೈಕ್’ನಲ್ಲಿ ತ್ರಿಬಲ್ ರೈಡಿಂಗ್ ವೇಳೆ ನಡುವಿನಲ್ಲಿ ಕುಳಿತಿದ್ದ ಮರೂರು ಗ್ರಾಮದ ಸೂರ್ಯ ಎಂಬಾತ ಲಾಂಗ್ ಪ್ರದರ್ಶನ ಮಾಡಿದ್ದಾನೆ. ಇದನ್ನು ವಿಡಿಯೋ ಚಿತ್ರೀಕರಿಸಿ ರೀಲ್ಸ್ ಮೂಲಕ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಲ್ಮೆಟ್ ರಹಿತವಾಗಿ ತ್ರಿಬಲ್ ರೈಡಿಂಗ್ ಮಾಡುವುದರೊಂದಿಗೆ ಮಾರಕಾಸ್ತ್ರ ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ಲಾಂಗ್ ಝಳಪಿಸಿದ ಸೂರ್ಯ ಸೇರಿದಂತೆ ಈತನಿಗೆ ಸಹಕಾರ ನೀಡಿದ ಬೈಕ್ ಸವಾರ ಅಳಿಲುಗುಪ್ಪೆಯ ಪುನೀತ್ ಹಾಗೂ ಹಿಂಬದಿ ಸವಾರ ಹೆಬ್ಬಾಲೆಯ ಶ್ರೀಧರ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಧರ ತಲೆಮರೆಸಿಕೊಂಡಿದ್ದು, ಸೂರ್ಯ ಮತ್ತು ಪುನಿತ್’ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಠಾಣಾಧಿಕಾರಿ ರಾಮಚಂದ್ರ ಅವರು ಎಚ್ಚರಿಸಿದ್ದಾರೆ
ಬೈಕ್’ನಲ್ಲಿ ಲಾಂಗ್ ಹಿಡಿದು ರೀಲ್ಸ್: ಮೂವರ ವಿರುದ್ಧ ಪ್ರಕರಣ ದಾಖಲು
