Saturday, September 20, 2025

ಜಾತಿಗಣತಿ ಸಮೀಕ್ಷೆ: ಕಾಲಂನಲ್ಲಿ ಕುರುಬ ಅಂತ ಮಾತ್ರ ಬರೆಸಿ ಎಂದ CM ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಜಾತಿಗಣತಿ ಸಮೀಕ್ಷೆ ಆರಂಭವಾಗಲಿದ್ದು, ಈ ವೇಳೆ ಧರ್ಮ ಜಾತಿ ಹೇಳಬೇಕು, ಹಾಗಾಗಿ ಕುರುಬರಲ್ಲಿ ಅನೇಕ ಜಾತಿಗಳಿವೆ ಅವೆಲ್ಲ ಬರೆಸಬೇಡಿ ಕುರುಬ ಅಂತ ಮಾತ್ರ ಬರೆಸಿ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಗದಗ ನಗರದಲ್ಲಿ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮ, ಜಾತಿ ಹೇಳಬೇಕು. ಇನ್ನು ಕುರುಬರಲ್ಲಿ ಅನೇಕ ಜಾತಿಗಳಿವೆ. ಆದರೆ ಕಾಲಂನಲ್ಲಿ ಅವೆಲ್ಲ ಬರೆಸಬೇಡಿ, ಕೇವಲ ಕುರುಬ ಅಂತ ಮಾತ್ರ ಬರೆಸಿ ಎಂದು ಹೇಳಿದರು.

ಇದನ್ನೂ ಓದಿ