Monday, October 20, 2025

ಅಕ್ಟೋಬರ್ 23 ರವರೆಗೆ ಬೆಂಗಳೂರಲ್ಲಿ ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಅಕ್ಟೋಬರ್.23ರವರೆಗೆ ಜಾತಿಗಣತಿ ಸಮೀಕ್ಷೆಗೆ ಸರ್ಕಾರ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.

ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ಸಮೀಕ್ಷೆ ಪ್ರಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. ಹಿಂದುಳಿದ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸಮೀಕ್ಷೆಗೆ ಅಕ್ಟೋಬರ್.23ರವರೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕುವಂತ ನಿರ್ಧಾರವನ್ನು ಕೈಗೊಂಡರು.

ಅಕ್ಟೋಬರ್ 23ರಿಂದ 31ರವರೆಗೆ ದೀಪಾವಳಿ ಹಬ್ಬದ ಬಳಿಕ ಬೆಂಗಳೂರಲ್ಲಿ ಮತ್ತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

error: Content is protected !!