Friday, September 26, 2025

ಕಾವೇರಿ ಕನ್ನಡಿಗರ ಭಾಗ್ಯ ದೇವತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ರಾಜ್ಯದಲ್ಲಿ ಜೀವನದಿ ಕಾವೇರಿ. ಹಳೆ ಮೈಸೂರು ಭಾಗದಲ್ಲಿ ಮೂರು ಕೋಟಿ ಜನರಿಗೆ ಕಾವೇರಿ ತಾಯಿ ನೀರು ಕೊಡ್ತಾ ಇದ್ದಾಳೆ. ತಮಿಳುನಾಡು, ಪುದುಚೇರಿಗೂ ನೀರು ಕೊಡ್ತಾ ಇದ್ದಾಳೆ. ಇಂತಹ ತಾಯಿಗೆ ನಮನ ಸಲ್ಲಿಸುವ ಕೆಲಸ ಆಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಾವೇರಿ ಆರತಿಯ ವೇದಿಕೆಯಲ್ಲಿ ಮಾತನಾಡಿದ ಅವರು, ಕಾವೇರಿ ಕನ್ನಡಿಗರ ಭಾಗ್ಯ ದೇವತೆ. ನಮ್ಮ ರೈತರ ಜೀವದಾನ ಕಾವೇರಿ. 10 ಸಾವಿರ ಮಂದಿ ಕೂತು ಆರತಿ ನೋಡಬೇಕೆಂದು ಕಾರ್ಯಕ್ರಮ ರೂಪಿಸಿದ್ದೋ. ಕೆಲವು ಅಡೆತಡೆಗಳು ಬಂದು ಅದು ಸಾಧ್ಯ ಆಗಿಲ್ಲ. ಇಂದು ಸಾಂಕೇತಿಕವಾಗಿ ಕಾವೇರಿ ಆರತಿ ಮಾಡ್ತಾ ಇದೀವಿ. ಆಗಮ ಶಾಸ್ತ್ರದ ಮೂಲಕ ಇಂದು ಕಾವೇರಿ ಆರತಿ ನಡೆಯುತ್ತಿದೆ. ಗಂಗಾರತಿಯನ್ನು ಚಲುವರಾಯಸ್ವಾಮಿ ತಂಡ ವೀಕ್ಷಣೆ ಮಾಡಿ ಬಂದಿದೆ. ಅವರು ಸಹ ನಮಗೆ ವರದಿ ಕೊಟ್ಟಿದ್ದಾರೆ. ಆ ಹಿನ್ನೆಲೆ ನಾವು ಕಾವೇರಿ ಆರತಿ ರೂಪಿಸಿದ್ದೇವೆ. ಯಾರೇ ತೊಂದರೆ ಮಾಡಬಹುದು, ಪ್ರಾರ್ಥನೆ ಯಾರ ಮನೆ ಸ್ವತ್ತಲ್ಲ ಎಂದರು.

ಇಂದಿನಿಂದ ಐದು ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ನಾವು ಸಿದ್ಧತೆ ಮಾಡಿರುವ ರೀತಿ ಕಾವೇರಿ ಆರತಿ ಮಾಡ್ತೀವಿ. ತಾಯಿ ಚಾಮುಂಡೇಶ್ವರಿ ನಮಗೆ ಶಕ್ತಿ ಕೊಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೇಲ್ಲರ ಅನ್ನದ ತಟ್ಟೆ. ಮೇಕೆದಾಟಿಗಾಗಿ ನಾವು ಹೆಜ್ಜೆ ಹಾಕಿದ್ದೇವೆ. ಮೇಕೆದಾಟು ಕಟ್ಟಲು ಕಾವೇರಿ ತಾಯಿ ಆಶೀರ್ವದಿಸಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ