Monday, September 15, 2025

ಇಂದಿನಿಂದ ಮೂರು ದಿನ ಕಾವೇರಿ ನೀರು ಪೂರೈಕೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.

ಕಾವೇರಿ ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್​ನಲ್ಲಿ ಕಾಮಗಾರಿ ನಡೆಯಲಿದೆ. ಹೀಗಾಗಿ, ಸೆಪ್ಟೆಂಬರ್ 17 ರ ವರೆಗೆ, ಅಂದರೆ ಮೂರು ದಿನ ಬೆಂಗಳೂರಿನ ಹಲವೆಡೆ ಕಾವೇರಿ ನೀರಿನ ಸರಬರಾಜಾಗುವುದಿಲ್ಲ. ಕಾವೇರಿ 5ನೇ ಹಂತದ ನಿರ್ವಹಣೆಗಾಗಿ ಕಾವೇರಿ ನೀರು ಬಂದ್ ಆಗಲಿದೆ. ಜನರು ಇಂದೇ ನೀರು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಸಲಹೆ ನೀಡಿದೆ.

ಸೆಪ್ಟೆಂಬರ್ 15, 16 ಹಾಗೂ 17 ರಂದು ಕಾವೇರಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಕಾವೇರಿ 5ನೇ ಹಂತದ ಪಂಪಿಂಗ್ ಸ್ಟೇಷನ್​ನಿಂದ ನೀರು ಪೂರೈಕೆ ಬಂದ್ ಆಗಲಿದೆ.

ಸೆ. 15ರ ಮಧ್ಯರಾತ್ರಿ 1ರಿಂದ ಸೆ. 17ರ ಮಧ್ಯಾಹ್ನ 1 ಗಂಟೆವರೆಗೆ ಕಾವೇರಿ 5ನೇ ಹಂತದಲ್ಲಿ 60 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ . ಕಾವೇರಿ 1, 2, 3, 4ನೇ ಹಂತದಲ್ಲಿ 24 ಗಂಟೆ ನೀರು ಪೂರೈಕೆ ಸ್ಥಗಿತವಾಗಲಿದ್ದು, ಅಗತ್ಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.

ಇದನ್ನೂ ಓದಿ