Wednesday, September 10, 2025

ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ: ಅಂತೂ ಚಿರಂಜೀವಿ ಕನಸು ಕೊನೆಗೂ ನನಸು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಮೆಗಸ್ಟಾರ್ ಚಿರಂಜೀವಿ ಮತ್ತೆ ತಾತ ಆಗಿದ್ದಾರೆ. ಚಿರಂಜೀವಿ ಸಹೋದರನ ಪುತ್ರನಿಗೆ ಗಂಡು ಮಗು ಜನಿಸಿದೆ. ಈ ಖುಷಿಯ ಸುದ್ದಿಯನ್ನು ಚಿರಂಜೀವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಮೆಗಾಸ್ಟಾರ್‌ ಪುತ್ರಿಯರಿಗೂ ಹೆಣ್ಣುಮಕ್ಕಳು, ಹಾಗೂ ರಾಮ್‌ಚರಣ್‌ಗೂ ಹೆಣ್ಣು ಮಗುವಿದೆ. ಆದರೆ ಇದೀಗ ಕುಟುಂಬದಲ್ಲಿ ಓರ್ವ ಗಂಡು ಮಗು ಜನಿಸಿದೆ. ಮೆಗಾಸ್ಟಾರ್ ಸಹೋದರ ನಾಗ್‌ಬಾಬು ಪುತ್ರ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ದಂಪತಿಗೆ ಗಂಡು ಮಗು ಜನಿಸಿದೆ.

ಕುಟುಂಬಕ್ಕೆ ಆಗಮಿಸಿರುವ ಹೊಸ ಪುಟ್ಟ ಸದಸ್ಯನ ಕುರಿತು ಮೆಗಾಸ್ಟಾರ್ ಮಾತನಾಡಿದ್ದಾರೆ. ‘ನಮ್ಮ ಜಗತ್ತಿಗೆ ಆಗಮಿಸಿರುವ ಪುಟಾಣಿಗೆ ಸ್ವಾಗತ, ನಮ್ಮ ಕುಟುಂಬದ ಹೊಸ ಸದಸ್ಯ ನಿನ್ನ ಮೇಲೆ ನಮ್ಮ ಪ್ರೀತಿ ಆಶೀರ್ವಾದ ಸದಾ ಇರುತ್ತೆ’ ಎಂದು ಹೇಳುವ ಮೂಲಕ ಮಗುವನ್ನು ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ