ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪೋಷಕರಾಗಿದ್ದಾರೆ.
ಕತ್ರಿನಾ ಕೈಫ್ ನವೆಂಬರ್ 07ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಇವರಿಗೆ ಮೊದಲ ಮಗು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು 2021ರಲ್ಲಿ ವಿವಾಹವಾಗಿದ್ದರು. ಈ ಬಗ್ಗೆ ವಿಕ್ಕಿ ಹಾಗೂ ಕಟ್ರೀನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಕತ್ರಿನಾ ಕೈಫ್, ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಜೋಡಿಗೆ ಮುದ್ದಾದ ಗಂಡು ಮಗು ಜನಿಸಿದೆ.
ಬಾಲಿವುಡ್ ಕಪಲ್ ವಿಕ್ಕಿ-ಕ್ಯಾಟ್ ಮನೆಯಲ್ಲಿ ಸಂಭ್ರಮ, ಕಂದಮ್ಮನ ಆಗಮನ 👶🏻

