ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ ಅರ್ಬಾಜ್ ಖಾನ್ ಮತ್ತೊಮ್ಮೆ ಅಪ್ಪ ಆಗಿದ್ದಾರೆ.
2023ರಲ್ಲಿ 56ನೇ ವಯಸ್ಸಿನಲ್ಲಿ ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್ ಅವರ ಕೈಹಿಡಿದಿದ್ದಾರೆ ಅರ್ಬಾಜ್ ಖಾನ್.
ಇದಾಗಲೇ ಅರ್ಬಾಜ್ ಖಾನ್ ಅವರಿಗೆ ಮಲೈಕಾರಿಂದ 22 ವರ್ಷದ ಮಗನಿದ್ದರೆ, ಶುರಾ ಖಾನ್ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 10 ವರ್ಷದ ಮಗಳಿದ್ದಾಳೆ. ಈಗ ಇಬ್ಬರೂ ಮತ್ತೊಮ್ಮೆ ಅಪ್ಪ-ಅಮ್ಮ ಆಗಿದ್ದಾರೆ.
ಶುರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮದುವೆಯಾಗಿನಿಂದಲೂ ವಯಸ್ಸಿನ ಅಂತರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್ ಟ್ರೋಲ್ ಕೂಡ ಆಗುತ್ತಿದೆ.